ರಾಮನವಮಿ ಸಂಭ್ರಮ
ಗುಲ್ಬರ್ಗ: ನಗರದ ರಿಂಗ್ ರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ಶುಕ್ರವಾರ ರಾಮನವಮಿ ಸಂಭ್ರಮ- ಸಡಗರ ಮನೆ ಮಾಡಿತ್ತು. ಇಲ್ಲಿನ ಆಡಳಿತ ಮಂಡಳಿ ರಾಮೋತ್ಸವ ಎಂಬ ಸರಣಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಿತ್ಯವೂ ರಾಮನ ಚರಿತ್ರೆ ಭಕ್ತರಿಗೆ ತಿಳಿಸುವ ಕಾರ್ಯಕ್ರಮ ವಾರಕಾಲ ಹಮ್ಮಿಕೊಂಡಿತ್ತು. ರಾಮನವಮಿ ದಿನವಾದ ಶುಕ್ರವಾರ ರಾಮ, ಲಕ್ಷ್ಮಣ ಹಾಗೂ ಸೀತಾ ಮಾತೆಯ ಪುತ್ಥಳಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರ ಸಮ್ಮುಖದಲ್ಲಿ ಮಹಾಪೂಜೆ, ಮಂಗಳಾರಗಳೂ ನಡೆದವು.