ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೃಜನಶೀಲ ಬರವಣಿಗೆ ಕೋರ್ಸ್ನ ಸಮಾರೋಪ

Rashmi Kasaragodu
Updated On : 20 Apr 2013, 11:38 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಏ.19
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಂಘ ಮತ್ತು ಕನ್ನಡ ಸಾಹಿತ್ಯ ವಿಭಾಗದ ಆಶ್ರಯದಲ್ಲಿ ಸೃಜನಶೀಲ ಬರವಣಿಗೆ ಸರ್ಟಿಫಿಕೇಟ್ ಕೋರ್ಸ್ನ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಹಾಗೂ ಅಧ್ಯಕ್ಷರೂ ಆದ ಡಾ. ಶಶಿಕಲಾ ಮೋಳ್ದಿ ಅತಿಥಿಯಾಗಿ ಮಾತನಾಡಿ, ಕ್ರಿಯಾಶೀಲತೆ, ಸ್ವಾಸ್ಥ ಮನಸ್ಸು ಮತ್ತು ಕನಸುಗಾರಿಕೆಯು ಸೃಜನಶೀಲತೆಗೆ ಇಂದು ಇಂಬು ನೀಡುತ್ತದೆ ಎಂದರು.
ಪ್ರಾಚಾರ್ಯ ಪ್ರೊ. ಎಸ್.ವಿ. ಧೂಳಗುಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಕಯಂತ್ರ ಬಂದು ಮಗ್ಗಿ ನೆನಪು ಹೋಗಿವೆ. ಟಿ.ವಿ. ಮತ್ತು ಕಂಪ್ಯೂಟರ್ಗಳು ಬಂದು ಬರವಣಿಗೆ ನಿಂತು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಬರೆಯಲು ಪ್ರೇರೆಪಿಸುವ ಕೋರ್ಸ್ನ್ನು ಆರಂಭಿಸಿ  ಅದನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡ ವಿಭಾಗದ ಪ್ರಾಧ್ಯಾಪಕರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಬಿ.ಎ. ಅಂತಿಮ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ನಡೆಯಿತು. ಸೃಜನಶೀಲ ಬರವಣಿಗೆ ಸರ್ಟಿಫಿಕೇಟ್ ಕೋರ್ಸ್ನ ವಿದ್ಯಾರ್ಥಿಗಳಾದ ಸಂಧ್ಯಾರಾಣಿ, ಅಶ್ವಿನಿ ಮತ್ತು ಮಹಾದೇವಿ ಮಾತನಾಡಿದರು. ಬೀಳ್ಕೊಟ್ಟ ವಿದ್ಯಾರ್ಥಿನಿಯರ ಪರವಾಗಿ ಯಮನಮ್ಮ, ಗಂಗಮ್ಮ ಮಾತನಾಡಿದರು. ನಾಲ್ಕು ಜನ ವಿದ್ಯಾರ್ಥಿನಿಯರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಈಶ್ವರಯ್ಯ ಮಠ ಸ್ವಾಗತಿಸಿದರು. ಮುಖ್ಯಸ್ಥ ಡಾ. ಶಾಂತಾ ಮಠ ಪರಿಚಯಿಸಿದರು. ಸರ್ಟಿಫಿಕೇಟ್ ಕೋರ್ಸ್ ಸಂಚಾಲಕ ಡಾ. ನಾಗೇಂದ್ರ ಮಸೂತಿ ಪ್ರಸ್ತಾವಿಕವಾಗಿ ಮಾತನಾಡಿದರು. ಪವಿತ್ರಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement