ಅಂಚೆ ಮತ: ಅವಕಾಶ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ನಿಯೋಜಿತ ಸಿಬ್ಬಂದಿಗೆ ತಮ್ಮ ಮತ ಚಲಾಯಿಸಲು ಅಂಚೆ ಮತ ಪತ್ರಗಳನ್ನು ಏ.21 ರಿಂದ ಮೇ 3ರವರೆಗೆ ವಿತರಿಸಲಾಗುತ್ತದೆ. ತಹಸೀಲ್ ಕಾರ್ಯಾಲಯದಲ್ಲಿ ಆರಂಭಿಸಿರುವ ಸೌಕರ್ಯ ಕೇಂದ್ರಗಳಿಂದ ಅಂಚೆ ಮತ ಪತ್ರಗಳನ್ನು ಪಡೆಯುವಂತೆ ಸೂಚಿಸಿರುವ ಜಿಲ್ಲಾಡಳಿತವು, ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗೆತ ತರಬೇತಿ ದಿನವಾದ ಏ.21 ರಿಂದ 23ರಂದೂ ಮತಪತ್ರ ಪಡೆಯಬಹುದಾಗಿದೆ ಎಂದು ತಿಳಿಸಿದೆ.