ಅಪಘಾತ: ಬೈಕ್ ಸವಾರ ಸಾವು
ರಾಯಚೂರು: ಸಿಂಧನೂರು ಮೂಲದ ವ್ಯಕ್ತಿಯೊಬ್ಬನಿಗೆ ಸಿರವಾರದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತನಾಗಿದ್ದಾನೆ.
ಮೃತನನ್ನು ಮಹಿಬೂಬ್ ಪಾಷಾ ಎಂದು ಗುರುತಿಸಲಾಗಿದೆ. ಈತ ಬೈಕ್ನಲ್ಲಿ ಸಿರವಾರಕ್ಕೆ ತೆರಳಿದ್ದು, ಸಿಂಧನೂರಿಗೆ ಮರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಾನವಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.