ಕರ್ನಾಟಕ ಸಮಾಜ ಸೇವಾ ರತ್ನ' ಪ್ರದಾನ
ಗುಲ್ಬರ್ಗ: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ಮಾರುತಿ ಜಾನಪದ ಸಾಂಸ್ಕೃತಿಕ ಸಂಘ ಉದ್ಘಾಟನಾ ಸಮಾರಂಭದಲ್ಲಿ ಸಚಿನ್ ರಾಜಾಪುರೆ ಮತ್ತು ಬಸವರಾಜ ತೋಟದ ಅವರಿಗೆ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಗೆಳೆಯರ ಬಳಗದ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಇಂದ್ರಮ್ಮ, ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ರಾಮಣ್ಣ, ಬಾನಂದೂರ ಕೆಂಪಯ್ಯ, ದಸಂಸ ರಾಜ್ಯಾಧ್ಯಕ್ಷ ಮೋಹನರಾಜ್, ಏಕತಾ ಚಾರಿಟಬಲ್ ಟ್ರಸ್ಟ್ನ ಶಿವಕುಮಾರ ಸ್ವಾಮಿ ನಾಶಿಮಠ, ಸಂವಿಧಾನ ಶಿಲ್ಪಿ ಕಲಾ ಮಹಾವಿದ್ಯಾಲಯದ ಅಧ್ಯಕ್ಷ ಶರಣಪ್ಪ ತೋರಣಕಲ್ ಇದ್ದರು.
ಇಂದು ಉದ್ಘಾಟನೆ
ಗುಲ್ಬರ್ಗ: ವಿಶ್ವ ಲಿಂಗಾಯತ ಪರಿಷತ್ ಗುಲ್ಬರ್ಗ ಘಟಕ ಉದ್ಘಾಟನೆ ಸಮಾರಂಭದಲ್ಲಿ ಲಿಂಗಾಯತ ವಧು- ವರರ ವಿವಾಹ ದಿಕ್ಸೂಚಿ ಬಿಡುಗಡೆ ಸಮಾರಂಭ ಏ.21ರಂದು ಬೆಳಗ್ಗೆ 10 ಗಂಟೆಗೆ ಗೋದುತಾಯಿ ನಗರದಲ್ಲಿರುವ ಎಂ.ಎಂ. ಕಾಡಾದಿ ಹಾಗೂ ಪ್ರಕಾಶ ಕಮಲಾಪುರ ಕಾಡಾದಿಯವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂ.ಎಂ. ಕಾಡಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಸಭೆ
ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಶಿವಯೋಗಿ ಸ್ವಾಮಿ ಸ್ಮಾರಕ ವಿದ್ಯಾವರ್ಧಕ ಸಂಘದ ಸರ್ವ ಸದಸ್ಯರ ಸಭೆಯನ್ನು ಏ.22 ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.ಸೇಡಂ ತಾಲೂಕಿನ ಶಾಂತವೀರೇಶ್ವರ ಪ್ರೌಢಶಾಲೆ ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎದುರುಗಡೆ ಇರುವ ಸ್ಥಳದಲ್ಲಿ ಈ ಸಭೆ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಂಜುಂಡ ಸ್ವಾಮೀಜಿ ವಹಿಸಲಿದ್ದಾರೆ.ಸಂಸ್ಥೆಯ ಆಗು ಹೋಗುಗಳ ಕುರಿತು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬರಲಿರುವುದರಿಂದ ಈ ಸಭೆ ಮಹತ್ವದಾಗಿದ್ದು, ಸರ್ವ ಸದಸ್ಯರು ಸಭೆಗೆ ಆಗಮಿಸಬೇಕು ಎಂದು ಪ್ರಕಟಣೆ ಮೂಲಕ ಕೋರಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಗುಲ್ಬರ್ಗ: ನಗರದ ಸಾಂಚಿ ನಗರ (ನ್ಯೂ ಘಾಟಗೆ ಲೇಔಟ್) ಬಡಾವಣೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 122ನೇ ಜಯಂತ್ಯುತ್ಸವ ಅಂಗವಾಗಿ ಏ. 22 ರಂದು ಸಂಜೆ 7ಕ್ಕೆ ಬಹಿರಂಗ ಸಭೆ ಮತ್ತು 23 ರಂದು ಭಾನಾಮತಿ ಪವಾಡದ ರಹಸ್ಯ ಬಯಲು ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭೀಮಶಕ್ತಿ ಯುವಕ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಭಂತೆ ಬೋಧಿ ಧಮ್ಮ ಸಾನ್ನಿದ್ಯ ವಹಿಸುವರು. ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಬಡಾವಣೆಯ ಹಿರಿಯ ಮುಖಂಡ ಮಾಪಣ್ಣ ಹೋಳ್ಕರ್ ಅಧ್ಯಕ್ಷತೆ ವಹಿಸುವರು.ಮಹಾನಗರ ಪಾಲಿಕೆ ಸದಸ್ಯ ಸಿದ್ದಾರ್ಥ ಜಿ. ಪಟ್ಟೆದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಯಡ್ರಾಮಿ ಸ.ಪ. ಪೂರ್ವ ಕಾಲೇಜಿನ ಪ್ರಾಚಾರ್ಯ ವಿಠ್ಠಲದಾಸ ಪ್ಯಾಗೆ ಮುಖ್ಯ ಭಾಷಣಕಾರರಾಗಿ ಆಗಮಿಸುವರು.ಪ್ರಾಧ್ಯಾಪಕ ಡಾ. ಶ್ರೀಶೈಲ್ ಫೊಳಿ, ಉಪನ್ಯಾಸಕ ಶಿವಶರಣಪ್ಪ ಮಾಳೆಗಾಂವ ಅವರು ಅಂದು ಸಂಜೆ 7ಕ್ಕೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.