ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚನ್ನಳ್ಳಿ ಗ್ರಾಪಂನಲ್ಲಿ ಜಾಥಾ

Rashmi Kasaragodu
Updated On : 21 Apr 2013, 2:02 am

ಸಿಂಧನೂರು: ಜಿಲ್ಲಾಡಳಿತದ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಚನ್ನಳ್ಳಿಯಲ್ಲಿ ಮತದಾನಕ್ಕಾಗಿ ಜಾಗೃತಿ ಕರೆಯನ್ನು ಜಾಥಾಮೂಲಕ ಹಮ್ಮಿಕೊಳ್ಳಲಾಗಿತ್ತು. ಪಿಡಿಒ ಅಮರೇಶ ಮಾತನಾಡಿ, ಎಲ್ಲಾ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ದಿನಾಂಕ 5.5.13 ರಂದು ತೆರಳಿ ಮತದಾನ ಮಾಡುವುದರ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು. ದೇಶದ ಸುಭದ್ರ ಭವಿಷ್ಯ ರೂಪಿಸಬೇಕು ಎಂದರು. ಈ ಜಾಗೃತಿ ಜಾಥಾದಲ್ಲಿ ಗೋರೆಬಾಳ ಸಿಆರ್‌ಪಿ ಮಲ್ಲಿಕಾರ್ಜುನ್ ಶಾಲಾ ಮುಖ್ಯಗುರುಗಳಾದ ತಿಪ್ಪಯ್ಯ, ತಿಮ್ಮಾರೆಡ್ಡಿ, ದುರಗಪ್ಪ, ರಾಮಣ್ಣ ಹಾಗೂ ಎಲ್ಲಾ ಸಹಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಶುವೈದ್ಯಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


24ರಂದು ಶಿಬಿರ


ರಾಯಚೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆ ಮತದಾರರ ಜಾಗೃತಿಗೆ ಏ. 24ರಂದು ರಂಗಮಂದಿರದಲ್ಲಿ ಶಿಬಿರ ಆಯೋಜಿಸಲಾಗಿದೆ. ನಗರದ ರಂಗಮಂದಿರದಲ್ಲಿ  ಬೆಳಗ್ಗೆ 10ಕ್ಕೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ನಡೆಯಲಿರುವ ಶಿಬಿರದಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಘ ಸಂಸ್ಥೆಗಳವರಿಗೆ ಶೇ. 100ರಷ್ಟು ಮತದಾನ ಮಾಡುವಂತೆ ಪ್ರೇರೇಪಿಸುವಂತೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಇಂದಿರಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement