ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯಾವ ದಾಖಲೆ ಬೇಕು?

Rashmi Kasaragodu
Updated On : 21 Apr 2013, 2:04 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.20
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತದಾರರಿಗೆ ಭಾವಚಿತ್ರವಿರುವ ಗುರ್ತಿನ ಚೀಟಿಯಲ್ಲದೇ ಇನ್ನುಳಿದ 23 ದಾಖಲೆಗಳನ್ನು ಬಳಸಿ ಮತದಾನ ಮಾಡಬಹುದೆಂದು ಜಿಲ್ಲಾಡಳಿತ ತಿಳಿಸಿದೆ.
ಮತದಾರರು ಚುನಾವಣಾ ಆಯೋಗದ ಸೂಚನೆಯಂತೆ 23 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಪ್ರದರ್ಶಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಭಾವಚಿತ್ರವಿರುವ ಮತದಾರರ ಅಧಿಕೃತ ಗುರುತಿನ ಚೀಟಿ (ಸ್ಲಿಪ್/ಕಾರ್ಡ್), ಪಾಸ್ ಪೋರ್ಟ್ಸ್, ವಾಹನ ಚಾಲನಾ ಪರವಾನಗಿ ಪತ್ರ, ಆದಾಯ ತೆರಿಗೆ ಪಾನ್ ಕಾರ್ಡು, ಕೇಂದ್ರ ಮತ್ತು ರಾಜ್ಯ ನೌಕರರ/ಪಬ್ಲಿಕ್ ಸೆಕ್ಟರ್  ಅಂಡರ್ ಟೇಕಿಂಗ್ಸ್ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಗಳಿಂದ ನೀಡಿದ ಗುರುತಿನ ಚೀಟಿ.
ಬ್ಯಾಂಕ್/ಅಂಚೆ ಕಚೇರಿ ಪುಸ್ತಕ, ಕಿಸಾನ್ ಕಾರ್ಡ್ ಪುಸ್ತಕ, ವಿದ್ಯಾರ್ಥಿಗಳಿಗೆ ಅಧಿಕೃತ ಶಿಕ್ಷಣ ಸಂಸ್ಥೆಯ ಹಾಗೂ ಸರ್ಕಾರಿ ಕಾಲೇಜುಗಳು ನೀಡಿದ ಗುರುತಿನ ಚೀಟಿ, ಭಾವಚಿತ್ರವಿರುವ ಜಮೀನಿನ ಪಟ್ಟಾ, ನೋಂದಣಿಯಾದ ಡೀಡ್, ಪಡಿತರ ಚೀಟಿ, ಭಾವಚಿತ್ರವಿರುವ ಜಾತಿ ಪ್ರಮಾಣ ಪತ್ರ, ಭಾವಚಿತ್ರವಿರುವ ಮಾಜಿ ಸೈನಿಕರ, ವಯೋವೃದ್ಧ, ವಿಧವಾ ಪಿಂಚಣಿ ಪುಸ್ತಕ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಶಸ್ತ್ರಾಸ್ತ್ರಗಳ ಪರವಾನಗಿ ಪತ್ರ, ಭಾವಚಿತ್ರವಿರುವ ಅಂಗವಿಕಲರ ಪ್ರಮಾಣ ಪತ್ರ. ನಿವೃತ್ತ ಮಾಜಿ ಸೈನಿಕರ ಸಿಎಸ್‌ಡಿ ಕ್ಯಾಂಟೀನ್ ಕಾರ್ಡ್. ಸಂಧ್ಯಾ ಸುರಕ್ಷಾ ಯೋಜನಾ ಪತ್ರ, ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಗುರುತಿನ ಚೀಟಿ, ಯಶಸ್ವಿನಿ ಕಾರ್ಡು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂ ನೌಕರರಿಗೆ ನೀಡಿರುವ ಗುರುತಿನ ಚೀಟಿ, ಹಿರಿಯ ನಾಗರಿಕರ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯು ನೀಡಿರುವ ಆರೋಗ್ಯ ವಿಮಾ ಯೋಜನೆ  ಸ್ಮಾರ್ಟ್ ಕಾರ್ಡ್, ಆಧಾರ್ ಕಾರ್ಡ್ ಸೇರಿ 23 ದಾಖಲೆಗಳಲ್ಲಿ ಯಾವುದಾದರೊಂದನ್ನು ಪ್ರದರ್ಶಿಸಿ ಮತ ಹಾಕಬಹುದೆಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments