ಲಿಂಗಸ್ಗೂರು(ಮೀ) ಕ್ಷೇತ್ರ ಕಣದಲ್ಲಿ 14, ಮಸ್ಕಿಯಲ್ಲಿ 10 ಅಭ್ಯರ್ಥಿಗಳು ಅಂತಿಮ
ಲಿಂಗಸ್ಗೂರು: ಪ್ರಸಕ್ತ ವಿಧಾನಸಭೆ ಚುನಾವಣೆ ಪ್ರಯುಕ್ತ ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು 14 ಜನ ಅಭ್ಯರ್ಥಿಗಳು ಮತ್ತು ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು 10 ಜನ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಹಿಂಪಡೆಯಲು ಶನಿವಾರ ಕೊನೆಯ ದಿನವಾದ್ದರಿಂದ ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ 17 ಜನ ಉಮೇದುವಾರರಲ್ಲಿ ಗಂಗಮ್ಮ ಬಂಡಿ, ನಾಗರಾಜ ತಿಪ್ಪಣ್ಣ ಮತ್ತು ಕಿರಿಲಿಂಗಪ್ಪ ಇವರು ತಮ್ಮ ನಾಮಪತ್ರ ಹಿಂಪದಿದ್ದಾರೆ ಹಾಗೂ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ 11 ಜನ ಉಮೇದುವಾರರಲ್ಲಿ ಸಿದ್ದಲಿಂಗಪ್ಪ ಸೋಮಲಿಂಗಪ್ಪ ತುರವಿಹಾಳ ಇವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಪಕ್ಷದ ಅಭ್ಯರ್ಥಿಗಳು ಮತ್ತು ಪಕ್ಷದ ಚಿಹ್ನೆ ಇಂತಿದೆ...
ಲಿಂಗಸ್ಗೂರು ಮೀಸಲು ಕ್ಷೇತ್ರ- ತಿಪ್ಪಣ್ಣ ರಾಮಚಂದ್ರಪ್ಪ ನಾಯಕ(ಕಮಲ), ದುರುಗಪ್ಪ ಸಂಗಪ್ಪ ಹೂಲಗೇರಿ(ಕೈ), ಪಂಪಾಪತಿ ದುರುಗಪ್ಪ(ಆನೆ), ಮಾನಪ್ಪ ವಜ್ಜಲ್(ತೆನೆ ಹೊತ್ತ ಮಹಿಳೆ) ಚಿನ್ನಪ್ಪ ದೇಶಪ್ಪ ಕೊಟ್ರಿಕಿ (ಅಟೋ ರಿಕ್ಷಾ), ಎಚ್.ಬಿ. ಮುರಾರಿ(ತೆಂಗಿನಕಾಯಿ), ಸಿದ್ದಪ್ಪ ಬಂಡಿ(ಸೀಲಿಂಗ್ ಫ್ಯಾನ್), ಶೇಖರಪ್ಪ ಚಂದಪ್ಪ (ಬಾಣ), ಸುಭಾಷ ಯಲ್ಲಪ್ಪ(ಮಿಕ್ಸಿ), ದಾನಮ್ಮ ಶಿವಶಂಕ್ರಪ್ಪ(ಹೊಲಿಗೆ ಯಂತ್ರ), ನಂದಪ್ಪ ಪರಮಣ್ಣ (ಮಡಕೆ), ಬಲರಾಮ ಖೇಮಣ್ಣ(ಟೇಬಲ್), ಯಶೋಧರ ಭಜಂತ್ರಿ(ತುತ್ತೂರಿ) ಹಾಗೂ ಡಾ. ರಂಗನಾಥ (ಗಾಳಿಪಟ) ಸೇರಿದಂತೆ ಒಟ್ಟು 14 ಜನ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಮಸ್ಕಿ ಕ್ಷೇತ್ರ: ಅಮರೇಶ ನಾಯಕ(ತೆನೆ ಹೊತ್ತ ಮಹಿಳೆ), ನಾಗರಾಜ ಚಿಗರಿ(ಆನೆ), ಪ್ರತಾಪಗೌಡ ಪಾಟೀಲ(ಕೈ), ಶಂಕರಕುಮಾರ ಮೇದಾರ(ಕಮಲ), ಅಮರೇಶ ನಾಯಕ (ಟಿವಿ), ನಾಗರಾಜ ಮೇದಾರ(ಅಟೋ ರಿಕ್ಷಾ), ಮಹಾದೇವಪ್ಪಗೌಡ(ತೆಂಗಿನಕಾಯಿ), ಶೇಖರಪ್ಪ ತಳವಾರ (ಸೀಲಿಂಗ್ ಫ್ಯಾನ್), ತಿರುಪತಿ ಬಸಪ್ಪ(ತಕ್ಕಡಿ) ಹಾಗೂ ಆರ್.ರಂಗಪ್ಪ ನಾಯಕ(ಹೂಕೋಸು) ಸೇರಿದಂತೆ ಒಟ್ಟು 10 ಜನ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಇರುತ್ತಾರೆ.