ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅತ್ಯಾಚಾರ ಪ್ರಕರಣಕ್ಕೆ ಖಂಡನೆ

Lingaraj Badiger
Updated On : 22 Apr 2013, 11:33 am

ರಾಯಚೂರು: ನವದೆಹಲಿಯಲ್ಲಿ ಈಚೆಗೆ ಐದು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿರುವ ಎಐಡಿಎಸ್ ಮತ್ತತರೆ ಸಂಘಟನೆಗಳ ಕಾರ್ಯಕರ್ತರು ಶನಿವಾರ ನಗರದ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್ಸೆಸ್ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿ, ಮೃಗೀಯ ಕೃತ್ಯಗಳಿಗೆ ಸರ್ಕಾರಗಳು ಕಡಿವಾಣ ಹಾಕುವಲ್ಲಿ ವಿಫಲವಾಗಿವೆ. ಪರಿಣಾಮ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
ಅತ್ಯಾಚಾರದಂಥ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಆಡಳಿತಗಾರರ ನಿರ್ಲಕ್ಷ್ಯವೇ ಕಾರಣವಾಗಿದೆ. ಅತ್ಯಾಚಾರಿಗಳಿಗೆ ಶೀಘ್ರದಲ್ಲಿಯೇ ಶಿಕ್ಷೆಯಾಗದಿರುವುದು ಅಪರಾಧ ಹೆಚ್ಚಳಕ್ಕೆ ದಾರಿ ಮಾಡಿದೆ. ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅತ್ಯಾಚಾರ ಸೇರಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಮುಂದಾಗಬೇಕೆಂದು ಆಗ್ರಹಿಸಿದರು. ಎಐಎಂಸ್ಸೆಸ್ ಜಿಲ್ಲಾಧ್ಯಕ್ಷ ಚೇತನಾ ಬನಾರೆ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ, ಸಲೀಂ ಯಸೂಫ್, ಮಂಜುಳಾ, ಲಕ್ಷಿ ಇದ್ದರು.

--
ಅಂಬೇಡ್ಕರ್, ಜಗಜೀವನರಾಂ ಜಯಂತಿ ಆಚರಣೆ
ರಾಯಚೂರು: ಮತೀಯ ಮನೋಭಾವನೆ, ಸ್ವಾರ್ಥದಿಂದ ಕೂಡಿದ ಜನರಿಂದ ಚರಿತ್ರೆ ರಚನೆಯಾಗದು. ಚರಿತ್ರೆಯನ್ನು ಅರಿಯಲಾರದವರು ಚರಿತ್ರೆ ರಚಿಸಲಾರರು ಎಂದು ಶ್ರೀಕೃಷ್ಣದೇವರಾಯ ವಿವಿಯ ಪ್ರೊ. ಜೆ.ಸೋಮಶೇಖರ್ ಹೇಳಿದರು. ತಾಲೂಕಿನ ಶಕ್ತಿನಗರದ ಅಂಬೇಡ್ಕರ್ ಭವನದಲ್ಲಿ ಈಚೆಗೆ ಕೆಪಿಸಿ ಮತ್ತು ಕವಿನಿನಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘದಿಂದ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ವಿನಾಶದ ಕರೆ, ಆತ್ಮಾವಲೋಕನದ ಬರವಣಿಗೆ ಹಿಂದೂ ಧರ್ಮದ ಯುದ್ಧದ ಬರವಣಿಗೆಯ ಚರಿತ್ರೆಯನ್ನು ಸರಿಯಾದ ರೀತಿಯಲ್ಲಿ ಕಟ್ಟುವುದೇ ಅಂಬೇಡ್ಕರ್ ಗುರಿಯಾಗಿತ್ತು ಎಂದು ಹೇಳಿದರು.
ಮತ್ತೊಬ್ಬ ಭಾಷಣಕಾರ ಜೆ.ಎಲ್.ಈರಣ್ಣ ಮಾತನಾಡಿದರು. ಅಧ್ಯಕ್ಷತೆ ಆರ್‌ಟಿಪಿಎಸ್ ಇ.ಡಿ. ಚಂದ್ರಕಾಂತ ವಹಿಸಿದ್ದರು. ವಿವಿಧ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ವೇಳೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕೆಪಿಸಿ ಅಧಿಕಾರಿಗಳಾದ ಎನ್.ಕೆ.ಪ್ರಭಾಕರ್, ಚಿನ್ನಸೋಮಯ್ಯ, ನಾರಾಯಣಸ್ವಾಮಿ, ಡಾ.ಗೋಕುಲ ಆನಂದ, ವಿ.ಎಸ್.ಭಾವಿಕಟ್ಟಿ ಸೇರಿದಂತೆ ಅನೇಕರಿದ್ದರು. ಕೆಪಿಸಿ ನೌಕರರು ಹಾಗೂ ಕವಿನಿನಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement