ಆಕಸ್ಮಿಕ ಬೆಂಕಿ; ಮಹಿಳೆ ಸಾವು
ರಾಯಚೂರು: ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ. ಮೃತಳನ್ನು ಗ್ರಾಮದ ಅನಂತಮ್ಮ ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿ ಸ್ಟೋವ್ ಗೆ ಬೆಂಕಿ ಹಚ್ಚುವ ವೇಳೆ ಆಕಸ್ಮಿಕವಾಗಿ ಆಕೆ ಧರಿಸಿದ್ದ ಬಟ್ಟೆಗೆ ತಗುಲಿ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಿಂದ ಬಳಲಿದ್ದು ಚಿಕಿತ್ಸೆ ವೇಳೆ ಆಕೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪಿಎಚ್‌ಡಿ ಪದವಿ ಪ್ರದಾನ
ರಾಯಚೂರು: ನಗರದ ಎಸ್‌ಎಲ್‌ಎನ್ ಎಂಜಿನಿಯರಿಂಗ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಝಾಕ್ ಉಸ್ತಾದ್ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು ರಸಾಯನ ಶಾಸ್ತ್ರ ವಿಭಾಗದಲ್ಲಿ ಕೈಗೊಂಡ ಸಂಶೋಧನೆಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಪ್ರೊ. ಬಿ.ಎಚ್.ಎಂ. ಮೃತ್ಯುಂಜಯ ಸ್ವಾಮಿ ಮಾರ್ಗದರ್ಗನದಲ್ಲಿ ಸಿಂಥೆಸಿಸ್, ಕ್ಯಾರೆಕ್ಟರೈಜೇಶನ್ ಅಂಡ್ ಆಂಟಿಮೈಕ್ರೋಬಿಯಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಟ್ರಾನ್ಜಿಶನ್ ಮೆಟಲ್ ಕಾಂಪ್ಲೆಕ್ಸ್ ವಿತ್ ವೇರಿಯಸ್ ಸ್ಚಿಫ್ ಬೇಸಸ್ ಎಂಬ ವಿಷಯದ ಮೇಲಿನ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ ಎಂದು ಗುಲ್ಬರ್ಗ ವಿವಿ ತಿಳಿಸಿದೆ.