ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಸ್‌ಎಸ್‌ಕೆ ಸಮಾಜಕ್ಕೆ ಶಶಿದಾನಿ ಮರು ಆಯ್ಕೆ

Lingaraj Badiger
Updated On : 22 Apr 2013, 11:32 am

ಸಿಂಧನೂರು: ಸಿಂಧನೂರಿನ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ(ಎಸ್.ಎಸ್.ಕೆ.) ಸಮಾಜದ ನೂತನ ಅಧ್ಯಕ್ಷರಾಗಿ ಶಶಿಕುಮಾರ ಎನ್. ದಾನಿ ಮರು ಯ್ಕೆಯಾದರು.
ಆದರ್ಶ ಕಾಲೋನಿಯ ಶ್ರೀಅಂಬಾಭವಾನಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೇಮಕ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಶ್ರೀನಿವಾಸ.ವಿ.ಬಾಕಳೆ ಹಾಗೂ ಗುರುನಾಥನಾ.ಪಿ.ಬದಿ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಆರ್.ದಾನಿ, ಕಾರ್ಯದರ್ಶಿಗಳಾಗಿ ನಾರಾಯಣ ಆರ್.ಪವಾರ, ಶಂಕರಸಾ.ಜಿ.ಕಬಾಡಿ ಹಾಗೂ ಆನಂದ.ಆರ್.ರಾಯಬಾಗಿ, ಖಜಾಂಚಿಗಳಾಗಿ ಗಂಗಾಧರಸಾ.ಎನ್.ಕಬಾಡಿ, ಸದಸ್ಯರುಗಳಾಗಿ ನಾಗರಾಜ ಟಿ. ಕಾಟವಾ, ಶಂಕರಸಾ ಎಂ. ಬಸೂದೆ, ಪರಶುರಾಮ ಎಚ್. ಪಾಟೀಲ್ ಆಯ್ಕೆಯಾದರು.
ಸಭೆಯಲ್ಲಿ ಸಮಾಜದ ಹಿರಿಯ ಡಾ.ಜೆ.ಎನ್.ಇರಕಲ್,ಅಂಬಾಸಾ ರಂಗರಾಜ್, ರಂಗನಾಥಸಾ ಚಾವಡಿಮನಿ, ವೆಂಕಟೇಶ ಕಬಾಡಿ, ರಿಂದಾಸಾ ರಾಯಬಾಗಿ, ರಾಮಕೃಷ್ಣಸಾ ಪವಾರ್, ಡಾ.ಸುಭಾಷ ರಾಯಬಾಗಿ, ಶಿವಣಸಾ ರಾಯಬಾಗಿ, ಜಗನ್ನಾಥಸಾ ಬದಿ, ಮನೋಹರ ಬಾಕಳೆ, ಸುನಿಲ್ ಶಿದ್ಲಿಂಗ್ ತರುಣ ಸಂಘದ ಅಧ್ಯಕ್ಷರಾದ ರಾಜು ಬದಿ, ಸದಸ್ಯರು ಪಾಲ್ಗೊಂಡಿದ್ದರು.
ಅಂಬಾಭವಾನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪದಾಧಿಕಾರಿಗಳೆಲ್ಲರೂ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಏ.18ರಂದು ಅಂಬಾದೇವಿ ಜಯಂತಿಯನ್ನು ಮತ್ತು 19ರಂದು ಶ್ರೀರಾಮನವಮಿ ಸಮಾಜದ ಸಲಕ ಬಾಂಧವರು ಅಂಬಾದೇವಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement