ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೈ' ಅಭ್ಯರ್ಥಿ ಹೂಲಗೇರಿ ರೋಡ್ ಶೋ

Lingaraj Badiger
Updated On : 22 Apr 2013, 11:37 am

ಮುದಗಲ್: ಲಿಂಗಸ್ಗೂರು ವಿಧಾನಸಭೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು. ನಂತರ ವಿವಿಧ ವಾರ್ಡ್‌ಗಳಲ್ಲಿ ಮತ ಯಾಚಿಸಿದರು.
ಪಟ್ಟಣದ ಮೇಗಳಪೇಟೆ ವಾರ್ಡ್ 1ರಿಂದ ಪಾದಯಾತ್ರೆ ಮೂಲಕ ಮತಯಾಚನೆ ಕಾರ್ಯವನ್ನು ಆರಂಭಿಸಿ ನಂತರ ಪಟ್ಟಣದ ಎಲ್ಲಾ ವಾರ್ಡಗಳಿಗೆ ಭೇಟಿ ನೀಡಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದರು. ಡಿ.ಎಸ್. ಹೂಲಗೇರಿ ಮತ ಯಾಚನೆ ಸಂದರ್ಭದಲ್ಲಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರಖಾನ್, ಮುಖಂಡರಾದ ಮಹಾಂತೇಶ ಪಾಟೀಲ್, ಸುರೇಶಗೌಡ ಪಾಟೀಲ್, ರಾಮಣ್ಣ ಹಿರೇಮನಿ, ಸುರೇಶ ಶೇಠ, ಷಣ್ಮುಕಪ್ಪ ಚಲುವಾದಿ, ಮಾಸೂಮ್ ಷರೀಫ್, ಇಸ್ಮಾಯಿಲ್, ಮೈಬೂಬ ಬಾರಿಗೀಡ, ಅನಿಲಕುಮಾರ, ಬಸವರಾಜ ಜಲ್ಲಿ, ಶಿವಶಂಕರಗೌಡ ಪಾಟೀಲ್, ರಾಮಪ್ಪ ಹೋಳ್ಯಾಚಿ ಮತ್ತಿತರರ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಸಲು ದಸಂಸ ಕರೆ
ರಾಯಚೂರು: ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ, ನೈಸರ್ಗಿಕ ಸಂಪತ್ತು ಲೂಟಿಯಂಥ ಅಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಸ್ಥಿರ ಹಾಗೂ ಕಳಂಕರಹಿತ ಸರ್ಕಾರ ರಚನೆಯ ಅವಶ್ಯಕತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ ಮತ್ತು ತಾಲೂಕು ಸಂಚಾಲಕ ಚನ್ನಬಸವ ಯಕ್ಲಾಸಪುರ, ರಾಜ್ಯ ಸಮಿತಿಯ ಸೂಚನೆ ಮೇರೆಗೆ ದಸಂಸ ಸಂಘಟನೆಯು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಮತ್ತು ಸರ್ವ ಜಾತಿ, ಜನಾಂಗದವರ ಏಳಿಗೆಗೆ ಸ್ಥಿರ ಮತ್ತು ಸುಭದ್ರ ಸರ್ಕಾರದ ಅವಶ್ಯಕತೆಯಿದೆ. ಅಷ್ಟೇ ಅಲ್ಲ ದಲಿತರ ಮೇಲೆ ದೌರ್ಜನ್ಯ ತಡೆಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಯಿತು. ಚರ್ಚ್‌ಗಳ ಮೇಲಿನ ದಾಳಿ, ಮುಸ್ಲಿಂ ಸಮಾಜದವರ ವಿರುದ್ಧ ಕಾಯಿದೆ ಜಾರಿಗೆ ತರುವಂಥ ಕೃತ್ಯ ಬಿಜೆಪಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸೋಲಿಸುವುದು ಮತ್ತು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement