ನಾಗಲಾಪುರ, ಮುದಗಲ್ನಲ್ಲಿ ಪಥಸಂಚಲನ
ಮುಕ್ತ ಮತದಾನಕ್ಕಾಗಿ ವಿಶೇಷ ಮೀಸಲು ಪಡೆಯಿಂದ ಸಂದೇಶ
ಮುದಗಲ್: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಬಂದ ಮತದಾರರಿಗೆ ಯಾವುದೇ ರೀತಿಯ ತೊಂದರೆಗಳು ಆಗದೇ ಮುಕ್ತ ಮತದಾನ ಮಾಡಲು ಮತದಾರರಿಗೆ ಸ್ಫೂರ್ತಿ ತುಂಬಲು ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಧ್ಯಪ್ರದೇಶ ರಾಜ್ಯದ ವಿಶೇಷ ಮೀಸಲು ಸಶಸ್ತ್ರ ಮೀಸಲು ಪಡೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ, ನಾಗಲಾಪುರದಲ್ಲಿ ಪಥಸಂಚಲನ ನಡೆಸಲಾಯಿತು.
ಸಮೀಪದ ನಾಗಲಾಪುರ ಗ್ರಾಮದಲ್ಲಿ ಕೂಡ ಪಥಸಂಚಲವನ್ನು ನಡೆಸಲಾಯಿತು. ನಂತರ ಮುದಗಲ್ಲ ಪಟ್ಟಣದಲ್ಲಿ ಮೇಗಳಪೇಟೆ, ಕಿಲ್ಲಾದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಧ್ಯಪ್ರದೇಶ ವಿಶೇಷ ಸಶಸ್ತ್ರ ಮೀಸಲು ಪಡೆಯು ತನ್ನ ಅಧಿಕಾರಿಗಳ ಜೊತೆಗೆ ಪಥಸಂಚಲನ ನಡೆಸಿದರು. ಪಥಸಂಚಲನದ ನೇತೃತ್ವನ್ನು ಪಿಎಸ್ಐ ಬಸವರಾಜ ಬಿಸನಕೊಪ್ಪ, ಎಎಸ್ಐ ಯೂಸೂಫ್ ವಹಿಸಿದ್ದರು.