ನಾನು ಹಂಪನಗೌಡರ ನಿಷ್ಠಾವಂತ ಬೆಂಬಲಿಗ: ಮುಳ್ಳೂರು
ಸಿಂಧನೂರು: ತಾವು ಟಿಕೆಟ್ಗಾಗಿ ಹಂಪನಗೌಡರ ಜೊತೆ ಅಸಮಾಧಾನಗೊಂಡಿದ್ದಾರೆ ಎಂದು ಕೆಲವರು ಗೊಂದಲ ಮೂಡಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ತಾವು ಹಂಪನಗೌಡ ನಿಷ್ಠಾವಂತ ಬೆಂಬಲಿಗ ಎಂದು ಜಿಪಂ ಸದಸ್ಯ ಚಂದುಸಾಬ ಮುಳ್ಳೂರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಕೆಲ ಅಲ್ಪಸಂಖ್ಯಾತ ಮುಖಂಡರು ಚಂದುಸಾಬ ಮುಳ್ಳೂರು ಕಾಂಗ್ರೆಸ್ನಿಂದ ಅಸಮಾಧಾನಗೊಂಡಿದ್ದಾರೆ ಎಂದು ಸುದ್ದಿ ಎಬ್ಬಿಸಿದ್ದಾರೆ. ತಾವು ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ಇತ್ತೀಚೆಗೆ ಜೆಡಿಎಸ್ ಸೇರಿರುವ ಜಹಿರುಲ್ಲಾ ವಕೀಲರು ಅಲ್ಪಸಂಖ್ಯಾತರ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.