ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಜಕಾರಣಿ ಪ್ರಜೆಗಳ ಆಶೋತ್ತರಕ್ಕೆ ಸ್ಪಂದಿಸಲಿ: ವಿಠ್ಠಲ್ ಹೇರೂರ

Rashmi Kasaragodu
Updated On : 23 Apr 2013, 12:33 pm

ಅಫಜಲ್ಪುರ: ಜನಪ್ರತಿನಿಧಿಗಳು ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸಿದಾಗ ಮಾತ್ರ ನಿಜವಾದ ರಾಜಕಾರಣಿಯಾಗುತ್ತಾರೆ ಎಂದು ಜೆಡಿಎಸ್ ಅಭ್ಯರ್ಥಿ ವಿಠ್ಠಲ್ ಹೇರೂರ ಹೇಳಿದರು.
ತಾಲೂಕಿನ ಘತ್ತರಗಾ ಗ್ರಾಮದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಫಜಲ್ಪುರ ತಾಲೂಕನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡುವುದಾಗಿ ವಾಗ್ದಾನ ಮಾಡಿದರು.
ಕರವೇ ತಾಲೂಕಾಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ವಿಠ್ಠಲ್ ಹೇರೂರ ಅವರ ಗೆಲವಿಗೆ ಕಂಕಣಬದ್ಧವಾಗಿ ನಿಂತಿದೆ. ಹಾಲಿ ಮತ್ತು ಮಾಜಿ ಶಾಸಕರ ಆಡಳಿತದಲ್ಲಿ ತಾಲೂಕಿನ ಅಭಿವೃದ್ಧಿ ಶೂನ್ಯವಾಗಿದೆ ಎಂದು ಹೇಳಿದರು. ಬಲಭೀಮ ಹೊಸಮನಿ, ಸಾತಲಿಂಗಪ್ಪ ಹಾವಶೆಟ್ಟಿ, ದಿಗಂಬರ ಕರಜಗಿ, ಮಹಾದೇವ ಪಾಟೀಲ್, ದಿಲೀಪ ಕುಲಕರ್ಣಿ, ದತ್ತು ಲಾಳಸಂಗಿ, ನಾನಾಗೌಡ ಅಮ್ಮಣಿ, ಗಾಂದಿ ದಿವಾಣಜಿ, ಸಿದ್ದು ಕಲ್ಲೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement