ಸಿಇಟಿ; ನಾಳೆ ಪೂರ್ವಭಾವಿ ಸಭೆ
ರಾಯಚೂರು: ನಗರದಲ್ಲಿ ಮೇ 1 ಮತ್ತು 2ರಂದು ನಡೆಯಲಿರುವ ವೃತ್ತಿಪರ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಹಿನ್ನೆಲೆಯಲ್ಲಿ ಏ.24ರಂದು ಪೂರ್ವಭಾವಿ ಸಿದ್ಥತಾ ಸಭೆ ಕರೆಯಲಾಗಿದೆ. ಈ ಪರೀಕ್ಷೆಗಳನ್ನು ಜಿಲ್ಲಾ ಕೇಂದ್ರದಲ್ಲಿ ನಡೆಸಲಿರುವುದರಿಂದ ಪೂರ್ವಭಾವಿ ಸಿದ್ಧತೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಜರಿರುವಂತೆ ಕೋರಲಾಗಿದೆ.
ಬಿಎಸ್ಸಾರ್ ಕಾಂಗ್ರೆಸ್ಗೆ ಸೇರ್ಪಡೆ
ಯಾದಗಿರಿ: ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಿಎಸ್ಸಾರ್ ಕಾಂಗ್ರೆಸ್ ಉದಯವಾಗಿದೆ. ಇದುವರೆಗೆ ಆಡಳಿತ ನಡೆಸಿದವರೆಲ್ಲ ಹಿಂದುಳಿದವರ ಕಲ್ಯಾಣಕ್ಕಾಗಿ ಚಿಂತಿಸಿಲ್ಲ. ಆದ್ದರಿಂದ ಈ ಬಾರಿ ಬಿಎಸ್ಸಾರ್ ಬೆಂಬಲಿಸಿ ಎಂದು ಕ್ಷೇತ್ರದ ಅಭ್ಯರ್ಥಿ ಮೌಲಾಲಿ ಅನಪುರ ಹೇಳಿದರು. ಅವರು ನಗರದ ವಾರ್ಡ್ ನಂ.18ರ ಕಾಂಗ್ರೆಸ್, ಜೆಡಿಎಸ್ನ ಯುವ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದರು. ಮಲ್ಲಿನಾಥ ಸುಂಗಲಕರ್, ಪ್ರಭು ಬುಕ್ಕಲ್, ವೀರಭದ್ರಪ್ಪ, ಭೀಮರಾಯ ಸುಂಗಲಕರ್, ಸೈದಪ್ಪ ಕೂಲೂರ, ಚಂದ್ರ ಚಟ್ಟರಕರ್, ಅನೀಲ ಸಾಗರ, ಮರೆಪ್ಪ ಕಾಗಿ, ರವಿಕಿರಣ, ಕಾಶಿನಾಥ ತಳಕ ಬಿಎಸ್ಸಾರ್ ಸೇರ್ಪಡೆಯಾದರು.