ಸೇವಾ ಗುಣ ಬೆಳೆಸುವ ಶಿಕ್ಷಣ ಅಗತ್ಯ: ಕಲ್ಲಾ
ಜೇವರ್ಗಿ: ಶಾಲೆಗಳಲ್ಲಿ ಅಕ್ಷರ ಜ್ಞಾನದ ಜತೆಗೆ ಸೇವಾ ಮನೋಭಾವ ಬೆಳೆಸಬಲ್ಲ ಶಿಕ್ಷಣ ಪದ್ಧತಿ ಇಂದು ಅಗತ್ಯವಾಗಿದೆ ಎಂದು ಬಸವ ಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ ಹೇಳಿದರು. ಪಟ್ಟಣದ ಚೇತನ್ ಕೋಚಿಂಗ್ ಕ್ಲಾಸಸ್‌ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಸಂಸ್ಕಾರದಿಂದ ದೂರ ಸರಿಯುತ್ತಿದ್ದಾರೆ. ಅವರಲ್ಲಿಯ ಜ್ಞಾನವನ್ನು ಜಾಗೃತಗೊಳಿಸಲು ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ ಎಂದರು. ಶರೀರ, ಬುದ್ಧಿ ಮತ್ತು ಮನಸ್ಸು ಪರಿವರ್ತನೆ ಮಾಡುವ ಶಿಕ್ಷಣ ನೀಡಿ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವರಾಜ ಕಲ್ಲಾ, ಉದ್ಯಮಿ ಬಾಪುಗೌಡ ಬಿರಾಳ, ಅಮೀನಪ್ಪ, ಸಂಗಮೇಶ ಪಾಟೀಲ್ ಆಗಮಿಸಿದ್ದರು. ಪರವೀನ ಸ್ವಾಗತಿಸಿದರು. ಸಿದ್ದು ಪಾಟೀಲ್ ಕಲ್ಲೂರ ನಿರೂಪಿಸಿದರು. ಸುಜಾತಾ ವಂದಿಸಿದರು.
ಛಾಯಾಗ್ರಫಿ ಸ್ಪರ್ಧೆ; ಸರ್ವಮಂಗಳಾ ಪಾಟೀಲ್ ಪ್ರಥಮ
ಗುಲ್ಬರ್ಗ: ನಗರದ ಕೇಂದ್ರೀಯ ವಿಶ್ವವಿದ್ಯಾಲಯವು ಆಯೋಜಿಸಿದ ಆಕ್ಯುತಾ-2013 ಅಂತರ ಮಹಾವಿದ್ಯಾಲಯಗಳ ಛಾಯಾಗ್ರಾಫಿ ಸ್ಪರ್ಧೆಯಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಎಂಎ ಫೈನ್ ಆರ್ಟ್ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ಸರ್ವಮಂಗಳಾ ಪಾಟೀಲ್ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವೇಶ್ವರ ಅಪ್ಪ, ಕಾಲೇಜಿನ ಉಪ ಪ್ರಾಚಾರ್ಯ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೈ-ಕ ಭಾಗದ ಚಿತ್ರ
ಕಲಾವಿದರ ವಿಳಾಸ ಪುಸ್ತಕ ಪ್ರಕಟ
ಗುಲ್ಬರ್ಗ: ನಗರದ ವಿ.ಟಿ.ಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋ ಪ್ರೈ.ಲಿ. ಹೈದರಾಬಾದ್ ಕರ್ನಾಟಕ ಚಿತ್ರ ಕಲಾವಿದರ ವಿಳಾಸವಿರುವ ಪುಸ್ತಕವು ಅತಿ ಶೀಘ್ರದಲ್ಲಿ ಪ್ರಕಟಿಸಲಿದೆ. ಆದ ಕಾರಣ ಚಿತ್ರಕಲಾವಿದರ ಸ್ವವಿವರ ಪಾಸ್‌ಫೋರ್ಟ್ ಹಾಗೂ ತಮ್ಮ ಕಲಾಕೃತಿಯ ಫೋಟೋಗಳನ್ನು ವಿ.ಟಿ.ಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋ ಪ್ರೈಲಿ. 8-1197/1 ಮಹಾಲಕ್ಷ್ಮಿ ರಸ್ತೆ ಹೊಸ ಭೋವಿ ಗಲ್ಲಿ ಹತ್ತಿರ ಬಂಬೂ ಬಜಾರ ಗುಲ್ಬರ್ಗ- 585104 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08472-277448 ಸಂಪರ್ಕಿಸಬೇಕು ಎಂದು ಲೋಹ ಶಿಲ್ಪ ಕಲಾವಿದ ವಿಶ್ವೇಶ್ವರಯ್ಯ ಟಿ.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ ಜಯಂತಿ
ಚಿತ್ತಾಪುರ: ತಾಲೂಕಿನ ರಾವೂರಿನ ಡಾ. ಅಂಬೇಡ್ಕರ್ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಗ್ರಾಪಂ ಸದಸ್ಯ ಶರಣು ಜ್ಯೋತಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಖಂಡರಾದ ಗುರುನಾಥ ಗುದ್ಗಲ್, ರಾಚಣ್ಣ ಅಂಗಡಿ, ರವಿ ನಡುವಿನಕೇರಿ, ರಂಗನಾಥ ಜಡಿ ಇತರರು ಇದ್ದರು.
ಪ್ಯಾರಾ ಮಿಲಿಟರಿ ಪಡೆ ಪಥ ಸಂಚಲನ
ಹುಮನಾಬಾದ್: ವಿಧಾನ ಸಭೆ ಚುನಾವಣೆಯು ಶಾಂತಿಯುತ್ತವಾಗಿ ನಡೆಯಲು ಪಟ್ಟಣದಲ್ಲಿ ಭಾನುವಾರ ಪ್ಯಾರಾ ಮಿಲಿಟರಿ ಪಡೆಯಿಂದ ಪಥ ಸಂಚಲನ ಜರುಗಿತು. ಡಿವೈಎಸ್ಪಿ ಅಮರನಾಥರೆಡ್‌ಡಿ ನೇತೃತ್ವದಲ್ಲಿ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು, ಅಂಬೇಡ್ಕರ್ ವೃತ್ತ, ಬಾಲಾಜಿ ಮಂದಿರ, ಬಸವೇಶ್ವರ ವೃತ್ತ, ಜೈನ್ ಗಲ್ಲಿ, ಜೇರಪೇಟ್, ಶಿವಪೂರ ಬೇಸ್, ಮುಖ್ಯ ರಸ್ತೆ, ಬಸವೇಶ್ವರ ಬಡಾವಣೆ, ಶಿವನಗರ ಸೇರಿದಂತೆ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಆಕರ್ಷಕ ಪ್ಯಾರಾ ಮಿಲಿಟರಿ ಪಡೆಯಿಂದ ಪಥ ಸಂಚಲನ ನಡೆಯಿತು. ಸಿಪಿಐಗಳಾದ ಅನಿಲಕುಮಾರ, ಶಿವಾನಂದ ಪವಾಡಶಟ್ಟಿ, ಪಿಎಸ್‌ಐಗಳಾದ ಮಲ್ಲಿಕಾರ್ಜುನ ಬಂಡೆ, ಜಿ.ಎಂ.ಪಾಟೀಲ್, ಲಕ್ಕಪ್ಪಾ ಅಗ್ನಿ, ಸುರೇಶ ಭಾವಿಮನಿ, ಬಸವರಾಜ ಫುಲಾರಿ, ವಿರೇಂದ್ರ, ಶಿವಶರಣಪ್ಪಾ ಕೊಡ್ಲಿ ಮತ್ತಿತರ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಇದ್ದರು.