ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

3 ನೀತಿ ಸಂಹಿತೆ ಪ್ರಕರಣ ದಾಖಲು

Lingaraj Badiger
Updated On : 24 Apr 2013, 11:02 am

ರಾಯಚೂರು: ಸಿಂಧನೂರಿನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣೆ ಪ್ರಚಾರ ಸಭೆಯ ವೇಳೆ ಅವರಿಗೆ ಬಹಿರಂಗವಾಗಿ ಸಿಂಧನೂರು ಕಾಂಗ್ರೆಸ್ ಅಭ್ಯರ್ಥಿ ಬೆಳ್ಳಿ ಗದೆ ಕೊಡುಗೆ ನೀಡಿದ್ದು ಸೇರಿ ಒಟ್ಟು ಮೂರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಚಾರ ಸಭೆಯಲ್ಲಿಯೇ ಬೆಳ್ಳಿ ಗದೆ ಮತ್ತು ಕಿರೀಟ ನೀಡಿದ್ದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಅದೇ ರೀತಿ ಎರಡು ವಾಹನಗಳನ್ನು ಪರವಾನಗಿಯಿಲ್ಲದೇ ಬಳಸಿದ್ದು ಹಾಗೂ ಸಿಂಧನೂರಿನಲ್ಲಿ ಬ್ಯಾನರ್, ಬಂಟಿಂಗ್ಸ್ ಅಳವಡಿಸಿದ್ದಕ್ಕೆ ಚುನಾವಣಾಧಿಕಾರಿಗಳು ನೀತಿ ಸಂಹಿತೆಯ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ೆ.
ಮಸ್ಕಿ; ಅನೇಕರು ಬಿಜೆಪಿಗೆ ಸೇರ್ಪಡೆ
ಮಸ್ಕಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಬಿಜೆಪಿ ಮುಖಂಡ ಆರ್.ಕೆ. ಹಿರೇಮಠ, ಮಸ್ಕಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಚಿತ್ತಾಪುರ, ಅಭ್ಯರ್ಥಿ ಶಂಕರ ಮ್ಯಾದಾರ್ ಮಾತನಾಡಿದರು. ಆದಪ್ಪ ಮೇದಾರ, ರಾಜಣ್ಣ ಸಿಂಧನೂರು, ಎಂ.ಜಿ. ಹುಲಗಪ್ಪ, ಎಸ್. ಹುಲಗಪ್ಪ, ಮಂಜುನಾಥ ಜೋಷಿ, ರಾಜುಗೌಡ ಭೂತಲದಿನ್ನಿ, ಮಲ್ಲಣ್ಣ ಗೇಡಿ, ರುದ್ರಗೌಡ ಕೊಂಡಿ, ಹನುಮೇಶ ಮಿಲಿಟರಿ, ದಾವಲಸಾಬ ಹಣಗಿ ಇದ್ದರು.
ಅಂಬೇಡ್ಕರ್ ಜಯಂತಿ ಆಚರಣೆ
ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಅಂಬೇಡ್ಕರ್ ಯುವಕ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವಕ ಸಂಘಧ ಅಧ್ಯಕ್ಷ ಮಲ್ಲೇಶ್ ಮಾತನಾಡಿದರು. ಸಂಘದ ಸದಸ್ಯರಾದ ಶ್ರೀನಿವಾಸ್, ಚಾಂದ್‌ಪಾಷಾ, ಲಕ್ಷ್ಮಣ, ಬಾಬು, ನರಸನಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement