ಗ್ರಾಪಂ ಕಟ್ಟಡ ಅಪೂರ್ಣ: ದೂರು
ರಾಯಚೂರು: ತಾಲೂಕಿನ ಆತ್ಕೂರು ಗ್ರಾಮದ ಗ್ರಾಪಂ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಪಂ ಸದಸ್ಯೆ ಉಮಾದೇವಿ ಒತ್ತಾಯಿಸಿದ್ದಾರೆ. ಈ ಕುರಿತು ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿರುವ ಅವರು, ಗ್ರಾಮಗ ಗ್ರಾಪಂ ಕಟ್ಟಡವನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದಿಂದ ಅರ್ಧಮರ್ಧ ನಿರ್ಮಿಸಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕಟ್ಟಡದ ಸುತ್ತ ಸದ್ಯ ಮುಳ್ಳುಕಂಟೆಗಳು ಬೆಳೆದು ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎಂದು ದೂರಿದ್ದಾರೆ. ಕೂಡಲೇ ಈ ಕಟ್ಟಡ ಪೂರ್ಣಗೊಳಿಸಿ ಗ್ರಾಪಂ ಆಡಳಿತಕ್ಕೆ ಒಪ್ಪಿಸಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವಂತೆ ಅವರು ಆಗ್ರಹಿಸಿದ್ದಾರೆ.