ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುಷ್ಟೂರು ಗ್ರಾಪಂ: 'ಕೈ' ಸೇರ್ಪಡೆ

Lingaraj Badiger
Updated On : 24 Apr 2013, 11:09 am

ದೇವದುರ್ಗ: ತಾಲೂಕಿನ ಮುಷ್ಟೂರು ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷ ಭಗವಂತ್ರಾಯ ನಾಯಕ ಹಾಗೂ 9 ಜನ ಗ್ರಾಪಂ ಸದಸ್ಯರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಗ್ರಾಪಂ ಸದಸ್ಯರಾದ ಸದಾಶಿವಪ್ಪ ಗೌಡ, ಮರಿಯಮ್ಮ, ಧನುಂಜಯ, ಹನುಮಂತ, ರಮೇಶ, ಮಲ್ಲಪ್ಪ ಮುದುಕಪ್ಪ, ಬಸವರಾಜ, ಉದಯ ಸೇರಿದರು.
ಬಿಜೆಪಿಗೆ ಹಿನ್ನಡೆ: ಮುಷ್ಟೂರು ಗ್ರಾಪಂ ಒಟ್ಟು 19 ಜನ ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಬೆಂಬಲಿತ 9 ಜನ ಗ್ರಾಪಂ ಸದಸ್ಯರಿದ್ದರು. ಬಿಜೆಪಿಯ 11 ಜನ ಸದಸ್ಯರಿದ್ದರು. ಸದ್ಯ 11 ಸದಸ್ಯರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ.
ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಬಿ.ವಿ. ನಾಯಕ, ಜಿಪಂ ಸದಸ್ಯ ಮಾಜಿ ಸಿದ್ದಯ್ಯ ತಾತಾ ಗುರುವಿನ್, ಬುಡ್ಡನಗೌಡ ಜಾಗಟಕಲ್, ಮಹಿಳಾ ಘಟಕದ ಅಧ್ಯಕ್ಷೆ ಕರೆಮ್ಮ ಗೋಪಾಲಕೃಷ್ಣ, ರಹೀಮ್ ಪಾಶಾ ಉದ್ದಾರ, ಖಾಜಾಗೌಡ ಗಬ್ಬೂರು, ಪುರಸಭೆ ಮಾಜಿ ಸದಸ್ಯ ಪ್ರಭು ಗದ್ಗಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement