ರಾಜಶೇಖರಗೆ ಬೆಂಬಲಿಸಲು ಮನವಿ
ಸಿಂಧನೂರು: ಸಿಂಧನೂರು ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ರಾಜಶೇಖರ ಪಾಟೀಲರನ್ನು ಮತದಾರ ಗೆಲ್ಲಿಸಿ ತನ್ಮೂಲಕ ಪ್ರಜಾಪ್ರಭುತ್ವಕ್ಕೆ ಗೆಲವು ತಂದು ಕೊಡಬೇಕೆಂದು ಪಕ್ಷದ ಯುವ ಮುಖಂಡ ಭೀಮಪ್ಪ ಕವಿತಾಳ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಂಧನೂರು ಮತಕ್ಷೇತ್ರ ಒಂದಡೆ ಬತ್ತದ ಕಣಜ ಮತ್ತೊಂದಡೆ ಬರದ ನಾಡು. ಈ ಅಸಮತೋಲನ ಹೋಗಲಾಡಿಸಲು ಇದುವರೆಗೆ ಯಾವ ಪಕ್ಷವೂ ಪ್ರಯತ್ನ ಮಾಡಿಲ್ಲ. ಎಲ್ಲ ನಾಯಕರು ಸ್ವಪ್ರತಿಷ್ಠೆ ಮತ್ತು ಜಾತಿ ವಿಷ ಬೀಜ ಬಿತ್ತಿ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿ ಮಾಡಿದ್ದಾರೆ. ಕಾರಣ ಸರಳ ಸಜ್ಜನಿಕೆಯ ಯುವ ನೇತಾರ ರಾಜಶೇಖರ ಪಾಟೀಲ ಕಳೆದ ಹಲವು ದಶಕಗಳಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ತಮ್ಮ ಮತ ನೀಡಿ ವಿಧಾನಸಭೆಗೆ ಕಳುಹಿಸಬೇಕೆಂದು ಕವಿತಾಳ ತಿಳಿಸಿದ್ದಾರೆ.