ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಮೂಹಿಕ ಪ್ರಾರ್ಥನೆ; ಚಿಂತನೆ ಕಾರ್ಯಕ್ರಮ

Lingaraj Badiger
Updated On : 25 Apr 2013, 10:56 am

ರಾಯಚೂರು: ನಗರದಲ್ಲಿ ಇತ್ತೀಚೆಗೆ ಬಸವ ಕೇಂದ್ರದಿಂದ ಸಾಮೂಹಿಕ ಪ್ರಾರ್ಥನೆ ಮತ್ತು ಚಿಂತನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಲ್ಲಿನ ಬಸವೇಶ್ವರ ಕಾಲನಿಯ ಬಸವಕೇಂದ್ರದ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಮಲ್ಲಿಕಾರ್ಜುನ ಗುಡಿಮನಿ ಅವರು ಬಸವ ಪ್ರಾರ್ಥನೆ ನಡೆಸಿಕೊಟ್ಟರು. ನಂತರ ಮಾತನಾಡಿದ ಗಂಗಾಧರ್, ಬಸವ ಜಯಂತಿಯ ಶತಮಾನೋತ್ಸವ ಆಚರಣೆ ಈ ಸಂದರ್ಭದಲ್ಲಿ ಶರಣ ತತ್ವಗಳನ್ನು ಅಳವಡಿಸಿಕೊಂಡಿರುವವರನ್ನು ಪ್ರಸಕ್ತ ಚುನಾವಣೆಯಲ್ಲಿ ಆಯ್ಕೆ ಮಾಡುವ ಅವಶ್ಯಕತೆಯಿದೆ ಎಂದು ಕರೆ ನೀಡಿದರು.
ಈ ವೇಳೆ ಎ. ವೀರಭದ್ರಪ್ಪ, ಕೇಂದ್ರದ ಅಧ್ಯಕ್ಷ ಬಿ.ಬಸವರಾಜಪ್ಪನವರು, ಬಸವಣ್ಣನವರ ವಚನಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರೇಶ್ ಅಂಗಡಿ, ಚೆನ್ನಯ್ಯಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement