ಅಂಚೆ ಮತ: 28ರಿಂದ ಮತದಾನಕ್ಕೆ ಅವಕಾಶ
ರಾಯಚೂರು: ನಗರ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಏ.28ರಿಂದ ಮೇ 7ರವರೆಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅನುಕೂಲ ಕಲ್ಪಿಸಲಾಗಿದೆ ಎಂದು ಸಹಾಯಕ ಆಯುಕ್ತರ ಕಚೇರಿ ತಿಳಿಸಿದೆ. ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅರ್ಹರಾಗಿರುವ ಮತದಾರರು, ಈ ಮತಗಟ್ಟೆ ಸೌಲಭ್ಯ ಪಡೆಯಬಹುದು. ಅದೇ ರೀತಿ ಈ ದಿನಾಂಕಗಳಂದು ಅಭ್ಯರ್ಥಿಗಳು ತಮ್ಮ ಮತಗಟ್ಟೆ ಏಜೆಂಟರನ್ನು ನೇಮಿಸಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಮತಗಟ್ಟೆಯಲ್ಲಿ ಹಾಜರಿರಲು ಸೂಚಿಸಲು ತಿಳಿಸಲಾಗಿದೆ.