ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೀತಿ ಸಂಹಿತೆ ಉಲ್ಲಂಘನೆ: 14 ಪ್ರಕರಣ

Rashmi Kasaragodu
Updated On : 26 Apr 2013, 11:21 am

ಸಿಂಧನೂರು: ಚುನಾವಣಾ ನೀತಿ ಸಂಹಿತೆಗಳನ್ನು ಉಲ್ಲಂಘಿಸಿದ ಕುರಿತು ಇದುವರೆಗೂ ಒಟ್ಟು 14 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಏ.6ರಂದು ಜೆಡಿಎಸ್ ಕಾರ್ಯಕರ್ತ ಜಿಲಾನಿಪಾಷ ಪರವಾನಗಿ ಪಡೆಯದೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ, 7ರಂದು ಜೆಡಿಯು ಜಿಲ್ಲಾಧ್ಯಕ್ಷ ಶಾಂತಗೌಡ ಜಾಗೀರದಾರ ಪರವಾನಗಿ ಪಡೆಯದೆ ವಾಹನದ ಮೇಲೆ ಪಕ್ಷದ ಬಾವುಟ ಬಳಸಿದ್ದಕ್ಕೆ, 15 ರಂದು ಎಪಿಎಂಸಿ ಸದಸ್ಯ ರಾಮರಾವ್, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ, ಜೆಡಿಎಸ್ ಅಧ್ಯಕ್ಷ ಲಿಂಗಪ್ಪ ಪರವಾನಿಗೆ ಪಡೆಯದೆ ವಾಹನದ ಮೇಲೆ ಪಕ್ಷದ ಬಾವುಟ ಬಳಸಿ ಪ್ರಚಾರ ಕೈಗೊಂಡಿದ್ದಕ್ಕೆ, 17ರಂದು ನಜೀರಬೇಗ್, ಇ. ಗೋವಿಂದಗೌಡ ವಲಗುಂಡಿ ಯಾವುದೇ ದಾಖಲೆಗಳಿಲ್ಲದೆ 3.80 ಲಕ್ಷ ಹಣವನ್ನು ಅನಧಿಕೃತವಾಗಿ ಕಮಾಂಡರ್ ಜೀಪಿನಲ್ಲಿ ಸಾಗಾಣಿಕೆ ಮಾಡಿದಕ್ಕೆ, 20 ರಂದು ಬಿಜೆಪಿ ಅಭ್ಯರ್ಥಿ ಕೆ. ಶೇಷಗಿರಿರಾವ್, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ, ಜೆಡಿಎಸ್ ಅಧ್ಯಕ್ಷ ಲಿಂಗಪ್ಪ, ಸಿಪಿಐಎಂಎಲ್ ರಮೇಶ, ಬಿಎಸ್ಆರ್ ಅಭ್ಯರ್ಥಿ ಕೆ. ಕರಿಯಪ್ಪ, ಕೆಜೆಪಿ ಅಭ್ಯರ್ಥಿ ರಾಜಶೇಖರ ಪಾಟೀಲ್ ನಾಮಪತ್ರ ಸಲ್ಲಿಸುವಾಗಿ ಪರವಾನಗಿ ಇಲ್ಲದೆ ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಕುಡಿವ ನೀರಿಗಾಗಿ ವಾಹನ ಬಳಸಿ, ವಾಹನಕ್ಕೆ ಧ್ವನಿವರ್ಧಕ ಬಳಸಿದ್ದಾರೆ. ಏ.21ರಂದು ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಪರವಾನಗಿ ಇಲ್ಲದೆ ವಾಹನ ಬಳಸಿ ಫುಡ್ ಪ್ಯಾಕೆಟ್, ನೀರಿನ ಪ್ಯಾಕೆಟ್ಗಳನ್ನು ಹಂಚಿದ್ದಕ್ಕೆ, ಪೂರ್ವಾನುಮತಿ ಪಡೆಯದೆ ಚುನಾವಣಾ ಬಹಿರಂಗ ಪ್ರಚಾರ, 500 ಊಟದ ಪ್ಯಾಕೆಟ್ ಹಂಚಿದ್ದಕ್ಕೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಏ.23ರಂದು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ರಾಹುಲ್ ಗಾಂಧಿಯವರಿಗೆ ಬೆಳ್ಳಿ ಗದೆ, ಬೆಳ್ಳಿ ಕಿರೀಟ ನೀಡಿದ್ದಕ್ಕೆ, ಬಂಟಿಂಗ್ಸ್ಗಳನ್ನು ಬಳಸಿದ್ದಕ್ಕೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement