ಮಾನಪ್ಪ ವಜ್ಜಲ್ಗೆ ಗ್ರಾಮಸ್ಥರಿಂದ ತರಾಟೆ
ಮುದಗಲ್: ಪಟ್ಟಣ ಸಮೀಪದ ಕನ್ನಾಪುರಹಟ್ಟಿಯಲ್ಲಿ ಮತಯಾಚನೆಗೆ ಬಂದಿದ್ದ ಮಾನಪ್ಪ ವಜ್ಜಲ್ ಮತ್ತು ಮುಖಂಡರಿಗೆ ಗ್ರಾಮಸ್ಥರು ತರಾಟೆಗೆ ತೆಗದುಕೊಂಡ ಪ್ರಸಂಗ ಗುರುವಾರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಬಹಿರಂಗ ಮತಯಾಚನೆ ಸಂದರ್ಭದಲ್ಲಿ ಜರುಗಿತು.
ಚುನಾವಣೆಯಲ್ಲಿ ಮಾತ್ರ ಮತ ಕೇಳಲು ಬರುವ ನೀವು ಊರಿಗೆ ಮಾಡಿದ್ದಾದರೂ ಏನು ಎಂದು ಪ್ರಶ್ನಿಸುವ ಮೂಲಕ ಗ್ರಾಮಸ್ಥರು ವಾಗ್ವಾದಕ್ಕೆ ಇಳಿದರು. ಆದರೆ ವಜ್ಜಲ್ರ ಕೆಲ ಬೆಂಬಲಿಗರು ಸಮಜಾಯಿಷಿಗೆ ಮುಂದಾಗುತ್ತಿದ್ದಂತೆಯೇ ಗ್ರಾಮದ ಯುವಕರು ಅವರೊಂದಿಗೂ ವಾಗ್ವಾದಕ್ಕಿಳಿದರು. ಗ್ರಾಮಸ್ಥರು ಸಮಸ್ಯೆ ಹೇಳಲು ಬಂದಾಗ “¬ÈÚß½ ಗ್ರಾಮದಲ್ಲಿನ ನಮ್ಮ ಮುಖಂಡ ಬಂದರೆ ಮಾತ್ರ ಕೆಲಸ ಮಾಡಿಕೊಡುವುದಾಗಿ ÔæÞØ¦§Â’ ಈಗ ಮತವನ್ನು ನಿಮ್ಮ ಮುಖಂಡರ ಬಳಿಯೇ ಕೇಳಿ ಎಂದು ತರಾಟೆಗೆ ತೆಗೆದುಕೊಂಡರು.
ಕ್ಷಮೆಯಾಚನೆ: ಗ್ರಾಮಸ್ಥರಿಂದ ತೀವ್ರ ತರಾಟೆಗೊಳಗಾದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಕಳೆದ ಅವಧಿಯಲ್ಲಿ ನನ್ನಿಂದ ತಪ್ಪಾಗಿದೆ. ಆದರೆ ಈ ಬಾರಿಯೂ ನನ್ನನ್ನ ಗೆಲ್ಲಿಸಿದರೆ ಆ ತಪ್ಪು ನಡೆಯದಂತೆ ಕೆಲಸ ಮಾಡುವುದಾಗಿ ಗ್ರಾಮಸ್ಥರಲ್ಲಿ ಕ್ಷಮೆ ಕೇಳಿದರು.
ನೀತಿ ಸಂಹಿತೆ ಉಲ್ಲಂಘನೆ?: ಚುನಾವಣ ಆಯೋಗ ಗುಡಿಗಳು, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಮತಯಾಚನೆ ಮಾಡುವುದನ್ನು ನಿಷೇಧಿಸಿದ್ದರೂ ಮಾಜಿ ಶಾಸಕ ಮಾನಪ್ಪ ವಜ್ಜಲ್ರು ಪಟ್ಟಣ ಸಮೀಪದ ಕನ್ನಾಪುರಹಟ್ಟಿ ಮಾರುತೇಶ್ವರ ದೇವಸ್ಥಾನದಲ್ಲಿ ಮತಯಾಚನೆ ಮಾಡಿದ್ದಾರೆ.