ಅಕಾಲಿಕ ಮಳೆ; ಬೆಳೆಗಾರರಲ್ಲಿ ಆತಂಕ
ಸಿಂಧನೂರು: ನಗರದಲ್ಲಿ ಗುರುವಾರ ರಾತ್ರಿ ಅಕಾಲಿಕವಾಗಿ ಬಂದ ಮಳೆಯಿಂದಾಗಿ ನೆಲ್ಲು ಒಣ ಹಾಕಿದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನಗರದ ಓಣಿಯೊಂದರ ಬಳಿ ಕೆಲ ರೈತರು ಬತ್ತವನ್ನು ಕೊಯ್ದು ಬಯಲಿನಲ್ಲಿ ಒಣ ಹಾಕಿದ್ದರು. ಎರಡು ದಿನಗಳಲ್ಲಿ 10 ನಿಮಿಷ ಮಳೆ ಬಂದು ಬತ್ತವೆಲ್ಲಾ ತೊಯ್ದು ತಪ್ಪಡಿಯಾಗಿದೆ. ಮಳೆ ಬಂದ ಸಂದರ್ಭದಲ್ಲಿ ಬತ್ತದ ಮೇಲೆ ಹೊದಿಸಲು ಬರಕಾ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದರೆ ನೆಲ್ಲು ತೊಯ್ಯುತ್ತಿರಲಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಮಳೆ ಕಡಿಮೆಯಾದರೂ ಗಾಳಿಯ ಆರ್ಭಟದಿಂದಾಗಿ ರೈತಾಪಿ ವರ್ಗ ತೀವ್ರ ಆತಂಕದಲ್ಲಿದ್ದಾರೆ.