ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೀರಿಗಾಗಿ ಕರ್ನಾಟಕದ ಮೊರೆಹೋದ ಆಂಧ್ರ

Rashmi Kasaragodu
Updated On : 27 Apr 2013, 11:13 am

ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ಈಗ ನೀರಿಗಾಗಿ ಕರ್ನಾಟಕದ ಮೊರೆಹೋಗಿದೆ. ಮೆಹಬೂಬ್‌ನಗರ ಜಿಲ್ಲೆಯಲ್ಲಿ ನೀರಿನ ಭಾರಿ ಅಭಾವ ತಲೆದೋರಿದ್ದು, ಜುರಾಲಾ ಯೋಜನೆಗಾಗಿ ನಾರಾಯಣಪುರ ಜಲಾಶಯದಿಂದ 3 ಟಿಎಂಸಿ-ಅಡಿ ನೀರು ಬಿಡುಗಡೆ ಮಾಡುವಂತೆ ಆಂಧ್ರ ಸರ್ಕಾರ ಕರ್ನಾಟಕಕ್ಕೆ ಮನವಿ ಮಾಡಿದೆ.
 ಪ್ರಸಕ್ತ ನಾರಾಯಣಪುರ ಜಲಾಶಯದಲ್ಲಿ ಲಭ್ಯವಿರುವ 18 ಟಿಎಂಸಿ-ಅಡಿ ನೀರಿನಲ್ಲಿ 3 ಟಿಎಂಸಿ ಅಡಿ ನೀರನ್ನು ಒದಗಿಸುವಂತೆ ಕೋರಿ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿ ಮಿನ್ನಿ ಮ್ಯಾಥ್ಯೂ ಅವರು ಕರ್ನಾಟಕದ ಎಸ್.ವಿ. ರಂಗನಾಥ್ ಅವರಿಗೆ ಪತ್ರ ಬರೆದಿದ್ದಾರೆ.
 ಬೇಸಿಗೆ ಕಾಲದಲ್ಲಿ ಜುರಾಲಾ ಯೋಜನೆಗೆ 3 ಟಿಎಂಸಿ-ಅಡಿ ನೀರಿನ ಅಗತ್ಯವಿದೆ. ಆದರೆ, ಇರುವುದು ಕೇವಲ ಒಂದು ಟಿಎಂಸಿ-ಅಡಿ ಮಾತ್ರ. 18 ಸಾವಿರ ಎಕರೆ ಪ್ರದೇಶದ ನೀರಾವರಿಗೆ ನೀರು ಒದಗಿಸುವುದರ ಜತೆಗೆ ಮಹಬೂಬ್‌ನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರನ್ನೂ ಇಲ್ಲಿಂದಲೇ ಪೂರೈಸಲಾಗುತ್ತಿದೆ. ಜುರಾಲಾಗೆ ನೀರಿನ ಒಳಹರಿವೂ ಇಲ್ಲ. ಹಾಗಾಗಿ ನೀರು ಒದಗಿಸುವ ಮೂಲಕ ನೆರವು ನೀಡಿ ಎಂದು ಪತ್ರದಲ್ಲಿ ಕೋರಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement