ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಟ್ಟಿ ಪರಿಷ್ಕರಣೆ: 54,010 ಸೇರ್ಪಡೆ

Rashmi Kasaragodu
Updated On : 27 Apr 2013, 11:13 am


ಕನ್ನಡಪ್ರಭ ವಾರ್ತೆ   ರಾಯಚೂರು   ಏ.26
ಜಿಲ್ಲೆಯಲ್ಲಿ ಈಚೆಗೆ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಗೆ 54,010 ಮತದಾರರು ಸೇರ್ಪಡೆಗೊಂಡಿದ್ದಾರೆ. ಸದ್ಯ ಮತದಾರರ ಒಟ್ಟು ಸಂಖ್ಯೆಯು 13,47,077ಗೆ ತಲುಪಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತದಾರರು ನಗರ ಕ್ಷೇತ್ರದಲ್ಲಿ ಮತದಾರರ ಯಾದಿಗೆ ಸೇರ್ಪಡೆಗೊಂಡಿದ್ದು,11,447 ಜನ ಮತದಾರರು ಹೊಸದಾಗಿ, ಬಿಟ್ಟು ಹೋದ ಮತದಾರರ ಹೆಸರುಗಳನ್ನು ಆಡಳಿತ ಸೇರ್ಪಡೆಗೊಳಿಸಿದೆ. ಪ್ರಸಕ್ತ ವರ್ಷದ ಜ.16ರಂದು ಕೈಗೊಂಡಿದ್ದ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಒಟ್ಟು 1293067ರಷ್ಟು ಮತದಾರರಿದ್ದರು. ಈ ಸಂಖ್ಯೆ ಸದ್ಯ 1347077ಗೆ ತಲುಪಿದೆ.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಸದ್ಯದ ಪರಿಷ್ಕರಣೆಯಂತೆ 177638 ಮತದಾರರಿದ್ದಾರೆ. ಜ.16 ರವರೆಗೆ ನಡೆದ ಪರಿಷ್ಕರಣೆ ವೇಳೆ 174409 ರಷ್ಟು ಮತದಾರರಿದ್ದು, ಸದ್ಯ 3229 ರಷ್ಟು ಮತದಾರರ ಸಂಖ್ಯೆ ಹೆಚ್ಚಳ ಕಂಡಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಸದ್ಯದ ಪರಿಷ್ಕರಣೆ ನಂತರ ಒಟ್ಟು ಮತದಾರರ ಸಂಖ್ಯೆಯು 204531 ಆಗಿದ್ದು, ಜ.16 ರವರೆಗೆ ಈ ಸಂಖ್ಯೆ 193084 ಆಗಿತ್ತು. ಸದ್ಯ 11447 ಜನ ಮತದಾರರು ಹೊಸದಾಗಿ ಸೇರಿದ್ದಾರೆ. ಸೇರ್ಪಡೆ: ಮಾನವಿ ಕ್ಷೇತ್ರದಲ್ಲಿ ಸದ್ಯ 199727 ಮತದಾರರಿದ್ದು, ಜ.16 ರವರೆಗೆ ಈ ಕ್ಷೇತ್ರದಲ್ಲಿ 191167 ಮತದಾರರಿದ್ದರು. ಈಗ 8560 ಮತದಾರರು ಸೇರ್ಪಡೆಗೊಂಡಿದ್ದಾರೆ. ದೇವದುರ್ಗ ಕ್ಷೇತ್ರದಲ್ಲಿ ಸದ್ಯ 185096 ಮತದಾರರಿದ್ದಾರೆ. ಜ.16 ರವರೆಗೆ 177847 ಮತದಾರರಿದ್ದರು. ಈಗ 7249 ಮತದಾರರು ಸೇರ್ಪಡೆಗೊಂಡಿದ್ದಾರೆ.
ಅದೇ ರೀತಿ ಲಿಂಗಸ್ಗೂರು ಕ್ಷೇತ್ರದಲ್ಲಿ ಸದ್ಯ 202104 ಮತದಾರರಿದ್ದಾರೆ. ಜ.16 ರವರೆಗೆ ಈ ಕ್ಷೇತ್ರದಲ್ಲಿ 191868 ಮತದಾರರಿದ್ದರು. ಸದ್ಯ 10236 ಮತದಾರರು ಸೇರ್ಪಡೆಯಾಗಿದ್ದಾರೆ. ಸಿಂಧನೂರು ಕ್ಷೇತ್ರದಲ್ಲಿ ಸದ್ಯ 209102 ಮತದಾರರಿದ್ದು, ಜ.16 ರವರೆಗೆ 202026 ಮತದಾರರಿದ್ದರು. ಸದ್ಯ 7076 ಮತದಾರರು ಸೇರ್ಪಡೆಗೊಂಡಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಸದ್ಯ 168879 ಮತದಾರರಿದ್ದಾರೆ. ಜ.16ರವರೆಗೆ ಈ ಕ್ಷೇತ್ರದಲ್ಲಿ 162666 ಮತದಾರರಿದ್ದರು. ಸದ್ಯ 6213 ಮತದಾರರು ಸೇರ್ಪಡೆಯಾಗಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಟ್ಟು 1355 ಮತದಾರರು ಆನ್ ಲೈನ್‌ನಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರೆಂದು ಚುನಾವಣೆ ವಿಭಾಗ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement