ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಸ್ಕಿ; ಕಾಂಗ್ರೆಸ್ ಅಭ್ಯರ್ಥಿ 'ಪ್ರತಾಪ' ರೋಡ್ ಶೋ

Rashmi Kasaragodu
Updated On : 27 Apr 2013, 11:10 am

ಮಸ್ಕಿ: ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ರೋಡ್ ಶೋ ನಡೆಸಿದರು. ಪಟ್ಟಣದ ತೇರ್ ಬಜಾರ್‌ದಿಂದ ತಮ್ಮ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದ ಅವರು ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪಾಟೀಲ್ ಅವರು ವಿವಿಧ ವಾರ್‌ಡಗಳಿಗೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಾದಯಾತ್ರೆಯ ಮೂಲಕ ತೆರಳಿ ಮತ ಹಾಕುವಂತೆ ಮನವಿ ಮಾಡಿದರು. ಕಾಂಗ್ರೆಸ್ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನೆಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಸಿದ್ದಣ್ಣ ಹೂವಿನಭಾವಿ, ಡಾ. ಬಿ.ಎಚ್. ದಿವಟರ್, ಡಾ. ಶಿವಶರಣಪ್ಪ ಇತ್ಲಿ, ದೊಡ್ಡಪ್ಪ ಕಡಬೂರು, ವೀರೇಶ ಹೂವಿನಭಾವಿ, ಸುರೇಶ ಅರಸೂರು, ಮಲ್ಲಯ್ಯ ಬಳ್ಳಾ, ಅಯ್ಯಣ್ಣ ಹೂವಿನಭಾವಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement