ಸಮಸ್ಯೆಗಳಿಗಿಲ್ಲ ಕೊನೆ
ಸಿಂಧನೂರು ಕ್ಷೇತ್ರದಲ್ಲಿ ಸಮಸ್ಯೆಗಳಿಗೇನೂ ಬರವಿಲ್ಲ. ಗೊರೇಬಾಳ ಪಿಕ್‌ಅಪ್, ವಳಬಳ್ಳಾರಿ ಪಿಕ್‌ಅಪ್‌ಗಳು ದಶಕಗಳೇ ಉರುಳಿದರೂ ಪೂರ್ಣಗೊಂಡಿಲ್ಲ. ವಳಬಳ್ಳಾರಿಯ ಸುಕ್ಷೇತ್ರ ಸುವರ್ಣಗಿರಿ ವಿರಕ್ತಮಠಕ್ಕೆ ಸಾಗುವ ವಳಬಳ್ಳಾರಿ ರಸ್ತೆ ದುರಸ್ತಿಗೆ ಸುಮಾರು 30 ಕೋಟಿಗೂ ಹೆಚ್ಚು ಹಣ 10 ವರ್ಷಗಳಲ್ಲಿ ಖರ್ಚಾಗಿದೆ. ಆದರೆ ರಸ್ತೆ ಮಾತ್ರ ಬದಲಾಗಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಪೂರೈಕೆ, ಕುಡಿವ ನೀರಿನ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ನಗರದಲ್ಲಿ ಯುಜಿಡಿ ಸ್ಕೀಮ್ ಜಾರಿಯಾಗದಿರುವುದು, ರಂಗಮಂದಿರ ಹಂದಿಗಳ ತಾಣವಾಗಿರುವುದು ನಾಗರಿಕರಲ್ಲಿ ಬೇಸರ ತಂದಿದೆ.
ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಆಮೆ ವೇಗದಲ್ಲಿದ್ದು, ಉದ್ಘಾಟನೆ ಯಾವಾಗ ಎಂಬ ಪ್ರಶ್ನೆ ಶ್ರೀಸಾಮಾನ್ಯನದ್ದು. ಈ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಮುಂಬರುವ ಶಾಸಕರ ಮೇಲಿದೆ. ಇಂಥ ಅವ್ಯವಸ್ಥೆಯ ಮಧ್ಯೆಯೇ ಮತ್ತೊಂದು ಚುನಾವಣೆಗೆ ಕ್ಷೇತ್ರದ ಮತದಾರರು ಸಜ್ಜಾಗಿದ್ದಾರೆ.