ಅಪರಾಧ ಸುದ್ದಿಗಳು ಸೇಂದಿ: ಒಬ್ಬನ ಸೆರೆ
ರಾಯಚೂರು: ತಾಲೂಕಿನ ಓಗೇನಹಳ್ಳಿ ಗ್ರಾಮದಲ್ಲಿ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಅಡಿವೆಪ್ಪ ಎಂದು ಗುರುತಿಸಲಾಗಿದೆ. ಈತ ಗ್ರಾಮದಲ್ಲಿ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಅವನಿಂದ 15 ಲೀ. ಸೇಂದಿ ಜಪ್ತಿ ಮಾಡಲಾಗಿದೆ. ಈ ಕುರಿತು ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವ್ಯಕ್ತಿ ಬಂಧನ
ರಾಯಚೂರು: ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಮತದಾರರಿಗೆ ಸೀರೆ ಮತ್ತು ಇತರೆ ದಿರಿಸು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಹಮೀದ್ ಎಂದು ಗುರುತಿಸಲಾಗಿದೆ. ಈತ ಯಾವುದೇ ದಾಖಲೆಗಳಿಲ್ಲದೆ 50 ಸಾವಿರ ಬೆಲೆಯ 56 ಸೀರೆಗಳು ಮತ್ತು 57 ಪಂಜಾಬಿ ಡ್ರೆಸ್‌ಗಳನ್ನು ಮತದಾರರಿಗೆ ಹಂಚಲು ರಾಯಚೂರಿನಿಂದ ಕೊಂಡೊಯ್ಯುತ್ತಿದ್ದ ವೇಳೆ ಸಿಂಗನೋಡಿ ಗ್ರಾಮದ ಬಳಿ ದಾಳಿ ಮಾಡಿದ ಪೊಲೀಸರು ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4.70 ಲಕ್ಷ ಜಪ್ತಿ
ರಾಯಚೂರು: ತಾಲೂಕಿನ ಶಕ್ತಿನಗರದ ಬಳಿ ಕಾರಿನಲ್ಲಿ ಅಕ್ರಮವಾಗಿ ದಾಖಲೆಗಳಿಲ್ಲದ ಹಣ ಸಾಗಿಸುತ್ತಿದ್ದ ವೇಳೆ ತಡೆದ ಪೊಲೀಸರು 4.70 ಲಕ್ಷ ಜಪ್ತಿ ಮಾಡಿದ್ದಾರೆ. ಕಶ್ಮೀರ್ ನಾಗ್ತಾಲ್ ಮತ್ತು ಕಾರು ಚಾಲಕ ಜಗನ್ನಾಥ ಎಂಬುವವರು ಕಾರಿನಲ್ಲಿ ದಾಖಲೆಗಳಿಲ್ಲದ ಹಣ ಸಾಗಿಸುತ್ತಿದ್ದ ವೇಳೆ ತಡೆದ ಪೊಲೀಸರು ಅಕ್ರಮ ಹಣ ಜಪ್ತಿ ಮಾಡಿ ಕಾರು ವಶಪಡಿಸಿಕೊಂಡಿದ್ದಾರೆ. ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.