ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾರರ ಜಾಗೃತಿ ಜಾಥಾಕ್ಕೆ ಚಾಲನೆ

Mainashree
Updated On : 28 Apr 2013, 11:33 am

ರಾಯಚೂರು: ಜಿಲ್ಲಾ ಮಟ್ಟದ ಮತದಾರರ ಶಿಕ್ಷಣ ಹಾಗೂ ಸಹಭಾಗಿತ್ವ(ಸ್ವೀಪ್) ಸಮಿತಿಯಿಂದ ಶನಿವಾರ ಸಮೀಪದ ಯರಮರಸ್‌ನಲ್ಲಿ ಮತದಾರರ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಜಾಥಾಕ್ಕೆ ಸಹಾಯಕ ಆಯುಕ್ತೆ ಎನ್.ಮಂಜುಶ್ರೀ ಚಾಲನೆ ನೀಡಿ, ಸಂವಿಧಾನಾತ್ಮಕ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸುವಂತೆ ಮನವಿ ಮಾಡಿದರು. ಈ ವೇಳೆ ನೋಟಿಗಾಗಿ ಓಟು ಬೇಡ, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತಚಲಾಯಿಸಿ, ನಿಮ್ಮ ನಡೆ ಬೂತ್ ಕಡೆ, ಮತಕ್ಕೆ ಹಣ ಕೊಡುವುದು ಮತ್ತು ಕೇಳೋದು ಅಪರಾಧ. ಪ್ರಜಾಪ್ರಭುತ್ವದ ಬಲವರ್ಧನೆಗೆ ತಪ್ಪದೇ ಮತದಾನ ಮಾಡಿ, ಉತ್ತಮ ಜನಪ್ರತಿನಿಧಿ ಚುನಾಯಿಸಲು ಮತ ನೀಡಿ ಮುಂತಾದ ಘೋಷಣೆ ಕೂಗಲಾಯಿತು. ಜಾಥಾದಲ್ಲಿ ಎಸ್‌ಎಲ್‌ಎನ್ ಎಂಜನಿಯರಿಂಗ್ ಕಾಲೇಜಿನ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯುನಿಸೆಫ್ ಅಧಿಕಾರಿ ರಾಘವೇಂದ್ರ ಭಟ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement