ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

Lingaraj Badiger
Updated On : 29 Apr 2013, 11:04 am

ರಾಯಚೂರು: ನಗರದ ವಿವಿಧ ಬಡಾವಣೆಗಳಲ್ಲಿ ಇತ್ತೀಚೆಗೆ ಮಾಜಿ ಶಾಸಕ ಪಾಪಾರೆಡ್ಡಿ ಅವರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಪರ ಪ್ರಚಾರ ನಡೆಸಿದರು. ಇಲ್ಲಿನ ಮಡ್ಡಿಪೇಟೆ, ಮಕ್ತಲ್‌ಪೇಟೆ ಮತ್ತಿತರೆ ಬಡಾವಣೆಗಳಲ್ಲಿನ ಮನೆ ಮನೆಗಳಿಗೆ ತೆರಳಿದ ಅವರು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿ ಮಾತನಾಡಿ, ಜಿಲ್ಲಾದ್ಯಂತ ಕಾಂಗ್ರೆಸ್ ಅಲೆಯಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ವ ಜಾತಿ, ಜನಾಂಗದವರನ್ನು ಗೌರವದಿಂದ ಕಾಣುವ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ನಗರದ ಜನತೆಗೆ ವಿವಿಧ ಮೂಲ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡಿರುವ ಅವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಪಕ್ಷದ ಪ್ರಮುಖರಾದ ವೀರೇಶ್, ಶ್ರೀನಿವಾಸರೆಡ್ಡಿ, ಟಿ. ಮಲ್ಲೇಶ್, ಜಿ. ಶೇಖರ್ ರೆಡ್ಡಿ, ಲಿಂಗಾರೆಡ್ಡಿ, ನಿಂಬೇಕಾಯಿ ಭೀಮರೆಡ್ಡಿ, ಲಾಲಪ್ಪ ಸೇರಿದಂತೆ ಅವರ ಬೆಂಬಲಿಗರು ಹಾಗೂ ಮುನ್ನೂರು ಕಾಪು ಸಮಾಜದವರು ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement