ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಮ್ಮನ್ನೇ ತಾವು ಮಾರಿಕೊಂಡ ವಜ್ಜಲ್

Lingaraj Badiger
Updated On : 29 Apr 2013, 11:00 am

ಮುದಗಲ್: ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಜನತೆಗೆ ಸ್ಥಿರ ಸರ್ಕಾರವನ್ನು ಒದಗಿಸುವುದೆಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಮುಖಂಡ  ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಪರವಾಗಿ ಬಹಿರಂಗ ಸಭೆಯಲ್ಲಿ ಮತಯಾಚಿಸಿ ಮಾತನಾಡುತ್ತ, ಈ ಹಿಂದೆ 5 ವರ್ಷಗಳವರೆಗೆ ಬಿಜೆಪಿ ಸರ್ಕಾರ ರಚನೆಯಾಗಿ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿ ತೇಲಾಡಿದೆ. ಅಲ್ಲದೇ ಪ್ರಮುಖವಾಗಿ ಲಿಂಗಸ್ಗೂರು ಕ್ಷೇತ್ರದಲ್ಲಿ ಕೂಡ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾನಪ್ಪ ಡಿ. ವಜ್ಜಲ್‌ಗೆ ಮತ ಚಲಾಯಿಸಿ ಶಾಸಕರನ್ನಾಗಿ ಆಯ್ಕೆ ಮಾಡಿ ಕಳಿಸಿದ್ದೀರಿ.
ಜನತೆಯನ್ನು ಮಾರಿದಂತೆ: ಆದರೆ ಅವರು ಮಾಡಿದ್ದೇನು, ಬಿಜೆಪಿಯ ಗುಂಪುಗಾರಿಕೆಯಲ್ಲಿ ತಮ್ಮನ್ನೇ ತಾವು ಹಣಕ್ಕೆ ಮಾರಿಕೊಂಡು ಕ್ಷೇತ್ರದ ಜನತೆಯನ್ನು ಮಾರಿದಂತೆ ಮಾಡಿದ್ದಾರೆ. ಮತ ಚಲಾಯಿಸುವುದು ತಮ್ಮ ಹಕ್ಕು. ವಿಚಾರಿಸಿ ಯಾರಿಗೆ ಮತ ಚಲಾಯಿಸಬೇಕೆಂದು ಯೋಚಿಸಿ ಮತನೀಡಿ ಎಂದರು.
ಇದೇ ಸಮಯದಲ್ಲಿ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಮಾತನಾಡಿ ಮತಯಾಚಿಸಿದರು. ಸಂಗಣ್ಣ ಬಯ್ಯಾಪುರ, ಪಾಮಯ್ಯ ಮುರಾರಿ, ಬಸವಂತರಾಯ ಕುರಿ ಮಾತನಾಡಿದರು.
ವೇದಿಕೆ ಮೇಲೆ ರಾಮಣ್ಣ ಹಿರೇಮನಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರ್‌ಖಾನ್, ಸೈ. ಯಾಸೀನ್ ಖಾದ್ರಿ, ಪಪಂ ಮಾಜಿ ಅಧ್ಯಕ್ಷೆ ಶರಣಮ್ಮ ಪಿ.ಮಠ, ಮಹಿಳಾ ಕಾಂಗ್ರೆಸ್ ತಾಲೂಕಾಧ್ಯಕ್ಷ ವಿಜಯಲಕ್ಷ್ಮೀ, ಪಪಂ ಸದಸ್ಯ ಮಾಸೂಮ್ ಷರೀಫ್, ಸುರೇಶ ಶೇಠ, ಆರ್.ಕೆ. ಉಸ್ತಾದ, ದಾವೂದ್, ಸಂಗಣ್ಣ ಓಲೇಕಾರ, ವೆಂಕಟೇಶ ಸಾಕಾ, ವೀರಣ್ಣ ದೇಪೇದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement