ದೇವಪ್ಪಗೌಡ ಅಂತ್ಯಕ್ರಿಯೆ
ಸಿಂದಗಿ: ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದ ಸಿಂದಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ದೇವಪ್ಪಗೌಡ ಗುರಲಿಂಗಪ್ಪಗೌಡ ಪಾಟೀಲ (51) ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ಸ್ವಗ್ರಾಮ ಚಾಂದಕವಠೆಯಲ್ಲಿ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಬಂಥನಾಳ ಶ್ರೀಗಳು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಸ್.ವಿ.ಪಾಟೀಲ, ಶಾಸಕ ರಮೇಶ ಭೂಸನೂರ, ಮಾಜಿ ಶಾಸಕರಾದ ಶಿವಾನಂದ ಪಾಟೀಲ, ಸೇರಿದಂತೆ ಸಹಸ್ರಾರು ಜನ ಪಾಲ್ಗೊಂಡಿದ್ದರು.