ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

Lingaraj Badiger
Updated On : 29 Apr 2013, 10:59 am

ಸಿಂಧನೂರು: ನಗರದ ಆದರ್ಶ ಕಾಲೋನಿಯಲ್ಲಿರುವ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಸಂರಕ್ಷಣಾ ಸಂಸ್ಥೆಯಿಂದ ಬೇಸಿಗೆಯ ಉಚಿತ ತರಗತಿಗಳು ಆರಂಭಗೊಂಡಿವೆ.
ಎಸ್ಸೆಸ್ಸೆಲ್ಸಿಯ 110, ಪಿಯುಸಿಯ 30 ವಿದ್ಯಾರ್ಥಿಗಳು ಉಚಿತ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರು ಮಾದರಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲ ಉದ್ದೇಶದೊಂದಿಗೆ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸುವುದಲ್ಲದೆ ಫಲಿತಾಂಶ ಉತ್ತಮಗೊಳಿಸುವ ಆಶಯ ಹೊಂದಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಗುರುದೇವಸ್ವಾಮಿ ಹಿರೇಮಠ ತಿಳಿಸಿದ್ದಾರೆ. ಕಾರ್ಪೋರೇಟ್ ಸ್ಕಿಲ್ಸ್ ಮತ್ತು ಲೈಫ್ ಸ್ಕಿಲ್ಸ್ ಹಾಗೂ ಕಂಪ್ಯೂಟರ್ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶೈಕ್ಷಣಿಕ ಕೊರತೆಯಿಂದ ಅಭ್ಯಾಸದಲ್ಲಿ ಕುಂಠಿತವಾಗಬಾರದು ಎನ್ನುವ ಉದ್ದೇಶದಿಂದ ಉಚಿತ ಬೇಸಿಗೆ ತರಗತಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿವರಕ್ಕೆ ಮೊ. 99162 70938 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement