ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಂಗಭೂಮಿಗೆ ಪೋಷಣೆ ಅಗತ್ಯ: ಶರಣರು

Lingaraj Badiger
Updated On : 29 Apr 2013, 10:59 am

ಸಿಂಧನೂರು: ನಾಟಕಗಳ ಬೆಳವಣಿಗೆಗೆ ರಂಗಭೂಮಿಗೆ ಪೋಷಣೆ ನೀಡಿ ಬೆಳೆಸಬೇಕೆಂದು ಎಂದು ರೌಡಕುಂದಾದ ಸಿದ್ದರಾಮೇಶ್ವರ ಶರಣರು ಕರೆ ನೀಡಿದರು.
ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಪ್ರೀತಿ ಮಧುರ, ತ್ಯಾಗ ಅಮರ ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದೆ ರಂಗ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಈಗ ದೂರದರ್ಶನ, ಸಿನಿಮಾ ಪ್ರಭಾವಳಿಯಿಂದಾಗಿ ನಾಟಕ ನೋಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಜನತೆ ನಾಟಕದತ್ತ ಆಸಕ್ತಿ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ರಂಗಕರ್ಮಿಗಳ ಬದುಕು ಅತಂತ್ರವಾಗಿದೆ. ಇಷ್ಟಲ್ಲದೆ ನಾಟಕಗಳು ಸಹ ಮೂಲೆ ಗುಂಪಾಗುವ ಸ್ಥಿತಿಯಲ್ಲಿವೆ. ನಾಟಕ ನೋಡುವ ಹವ್ಯಾಸ ರೂಢಿಯಾಗಬೇಕು ಎಂದರು. ಮುಖಂಡರಾದ ಶಿವಯ್ಯಸ್ವಾಮಿ ಗೊರೇಬಾಳ, ಶರಣೇಗೌಡ, ಎನ್. ವೀರೇಶಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement