ಕೆಜೆಪಿ ಎಸ್ಟಿ ಘಟಕಕ್ಕೆ ನೇಮಕ
ದೇವದುರ್ಗ: ಕರ್ನಾಟಕ ಜನತಾ ಪಕ್ಷದ ತಾಲೂಕು ಎಸ್ಟಿ ಘಟಕದ ಉಪಾಧ್ಯಕ್ಷರಾಗಿ ವೆಂಕಟೇಶ ನಾಯಕ ಪೂಜಾರಿ ನೇಮಕಗೊಂಡಿದ್ದಾರೆ. ಈ ಕುರಿತು ತಾಲೂಕು ಅಧ್ಯಕ್ಷ ಭೀಮಸೇನರಾವ್ ಪಾಟೀಲ್ ಆದೇಶ ಹೊರಡಿಸಿದ್ದು, ತಾಲೂಕಿನ ಕೆಜೆಪಿ ಸಂಘಟನೆ ಮತ್ತು ತಮ್ಮ ಪಕ್ಷದ ಅಭ್ಯರ್ಥಿ ಗೆಲವಿಗಾಗಿ ಸಕ್ರಿಯವಾಗಿ ಶ್ರಮಿಸಲು ತಿಳಿಸಿದ್ದಾರೆ.