ಜಾತ್ರೆ, ಸಂತೆ ಮುಂದೂಡಿಕೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು 7 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಜಾತ್ರೆ, ಸಂತೆ ಮುಂದೂಡಿ ಜಿಲ್ಲಾಧಿಕಾರಿ ಕಚೇರಿ ಆದೇಶಿಸಿದೆ.
ಚುನಾವಣೆಯ ಮತದಾನ ದಿನ ಮೇ 5ರಂದು ಮತದಾನವು ಸುರಕ್ಷಿತವಾಗಿ ನಡೆಯುವ ಹಾಗೂ ಎಲ್ಲರಿಗೂ ಮತದಾನಕ್ಕೆ ಅವಕಾಶವಾಗುವಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಅಂದು ನಡೆಯಲಿರುವ ಜಾತ್ರೆ, ದನಗಳ ಸಂತೆ, ಉತ್ಸವ ಮತ್ತು ಉರುಸುಗಳನ್ನು ಮುಂದೂಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.