ಧನಂಜಯಕುಮಾರಗೆ ಬೊಗಳುವುದು ಬಿಟ್ರೆ ಇನ್ನೇನು ಗೊತ್ತಿಲ್ಲ: ಈಶ್ವರಪ್ಪ
ಸಿಂಧನೂರು: ಧನಂಜಯ ಕುಮಾರ ಒಬ್ಬ ಹಿರಿಯ ರಾಜಕಾರಣಿ. ಅವರಿಗೆ ಮತ್ತೊಬ್ಬರ ಬಗ್ಗೆ ತಲೆಬುಡ ಇಲ್ಲದೆ ಬೊಗಳುವುದು ಬಿಟ್ಟರೆ ಇನ್ನೇನು ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಟುವಾಗಿ ಟೀಕಿಸಿದರು.
ಸಿಂಧನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಅವರ ಪರ ಚುನಾವಣಾ ಪ್ರಚಾರಾರ್ಥ ನಗರದಿಂದ ಜವಳಗೇರಾ ಗ್ರಾಮದವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ರೋಡ್ ಶೋ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಯಾರೊಬ್ಬರ ಮೇಲೆ ಅವಲಂಬಿತವಾದ ಪಕ್ಷವಲ್ಲ. ಪಕ್ಷದಿಂದ ಯಾರೇ ಹೋದರೂ ಮರಳಿ ಬಂದೇ ಬರುತ್ತಾರೆ. ಕಾಂಗ್ರೆಸ್ ಭಾರತ ದೇಶವನ್ನು ಲೂಟಿ ಹೊಡೆಯುವ ಪಕ್ಷವಾಗಿದ್ದು, ಇಂತಹ ಪಕ್ಷಗಳನ್ನು ಧಿಕ್ಕರಿಸುವ ಮೂಲಕ ಸುಭದ್ರ ಸರ್ಕಾರ ನೀಡಿದ ಬಿಜೆಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್, ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪೂರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಪ್ರಧಾನ ಕಾರ್ಯದರ್ಶಿ ಮಧ್ವರಾಜ್ ಆಚಾರ್, ಮುಖಂಡರಾದ ಪ್ರಾಣೇಶ ದೇಶಪಾಂಡೆ, ಹನುಮೇಶ ವಾಲೇಕಾರ, ಶಂಕರಗೌಡ ಜೋಳದರಾಶಿ, ಕಲ್ಲೂರು ಬಸಪ್ಪ, ಶೈಲಜಾ ಷಡಕ್ಷರಪ್ಪ, ದೇವೇಂದ್ರಪ್ಪ ನಾಯಕ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.