ನಾಳೆ ಎಸ್ಬಿಎಚ್ ಉದ್ಘಾಟನೆ
ರಾಯಚೂರು: ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ಎರಡು ನೂತನ ಶಾಖೆಗಳ ಉದ್ಘಾಟನೆ ಕಾರ್ಯಕ್ರಮವನ್ನು ಮೇ 2ರಂದು ಆಯೋಜಿಸಲಾಗಿದೆ. ನಗರದ ಲಿಂಗಸ್ಗೂರು ರಸ್ತೆಯಲ್ಲಿ ನಿಜಲಿಂಗಪ್ಪ ಕಾಲನಿ ಶಾಖೆ ಮತ್ತು ಎಚ್ಕೆ ದುಂಬಾ ನರ್ಸಿಂಗ್ ಹೋಂ ಕಾಂಪ್ಲೆಕ್ಸ್ನಲ್ಲಿ ಮಂತ್ರಾಲಯಂ ರಸ್ತೆ ಶಾಖೆಗಳನ್ನು ಅಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಗಣೇಶ ಪೈ ಉದ್ಘಾಟಿಸಲಿದ್ದಾರೆ ಎಂದು ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಬಾಲಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ಗುಲ್ಬರ್ಗ ವಲಯ ಉಪ ಪ್ರಧಾನ ವ್ಯವಸ್ಥಾಪಕ ಆರ್.ಎನ್. ರವೀಂದ್ರ ಕುಮಾರ್ ಪಾಲ್ಗೊಳ್ಳಲಿದ್ದಾರೆ.