ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಸ್ವಚ್ಛ ಆಡಳಿತಕ್ಕಾಗಿ ಸಿಪಿಎಂ ಬೆಂಬಲಿಸಿ'

Vishwanath S
Updated On : 1 May 2013, 12:16 pm

ಸಿಂಧನೂರು: ಸ್ವಚ್ಛ ಮತ್ತು ಜನಪರ ಆಡಳಿತ ಬರಲು ಸಿಪಿಎಂಗೆ ಬೆಂಬಲಿಸುವಂತೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಪಾಟೀಲ್ ಬೇರಗಿ ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿ, ಸಾಮಾನ್ಯ ಜನತೆಯ ಮೇಲೆ ದಬ್ಬಾಳಿಕೆ, ನಿರಂತರ ದೌರ್ಜನ್ಯ ನಡೆಯುತ್ತಿದೆ. ಬಡತನ, ನಿರುದ್ಯೋಗ, ಕೋಮುಗಲಭೆ ಹೆಚ್ಚುತ್ತಿವೆ. ಜನರಿಗೆ ಮೂಲ ಸೌಲಭ್ಯ ಗಗನಕುಸುಮವಾಗಿವೆ. ಎಲ್ಲ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಿವೆ ಹೊರತು ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ ಎಂದು ಕಿಡಿಕಾರಿದರು.
ಸಿಪಿಎಂ ಬೆಂಬಲಿಸಿದರೆ ಮಾತ್ರ ರೈತರಿಗೆ ಹಿತ: ಕಾರ್ಮಿಕರ, ಬಡವರ, ರೈತರ ಹಾಗೂ ಅಸಹಾಯಕರ ಹಿತ ಕಾಯಲು ಸಿಪಿಎಂನಿಂದ ಮಾತ್ರ ಸಾಧ್ಯ. ಜನ ವಿರೋಧಿ ಸರ್ಕಾರಗಳು ಆಡಳಿತ ನಡೆಸಿದರೆ ಏನೆಲ್ಲ ಅವಾಂತರ ಸೃಷ್ಟಿಯಾಗುತ್ತಿವೆ ಎನ್ನುವುದಕ್ಕೆ ಪ್ರಸ್ತುತ ಜನರು ಅನುಭವಿಸುತ್ತಿರುವ ಸ್ಥಿತಿಯೇ ಸಾಕ್ಷಿ. ಕಾರಣ ಮತದಾರರು ಈ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡರು.
ಪ್ರಚಾರ ಸಮಿತಿ ಸಂಚಾಲಕ ಬಸವರಾಜ ಇ.ಜೆ. ಹೊಸಳ್ಳಿ ಮಾತನಾಡಿ, ಕರ್ನಾಟಕದಲ್ಲಿ 30 ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮ ಪಕ್ಷ ಉಜ್ವಲ ಕರ್ನಾಟಕ ನಿರ್ಮಾಣಕ್ಕಾಗಿ ಪಣತೊಟ್ಟಿದೆ.
ಈ ಭಾರಿ ಚುನಾವಣೆಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕೋಮುವಾದ ಹಾಗೂ ಜಾತಿವಾದದ ವಿರುದ್ಧ ಹೋರಾಡಲು ಸಿಪಿಎಂಗೆ ಬೆಂಬಲ ಬೇಕಾಗಿದೆ ಎಂದರು.
ಲೂಟಿಗೆ ಅವಕಾಶವಿಲ್ಲ: ಪ್ರಚಾರ ಸಮಿತಿ ಸಂಘಟಕ ನಾಗರಾಜ ಪೂಜಾರ ಮಾತನಾಡಿ, ಈ ದೇಶದ ಸಂಪತ್ತು ಈ ಜನರಿಗೆ ಸೇರಿದ್ದು, ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುವ ಲೂಟಿಕೋರರಿಗೆ ನಮ್ಮ ಪಕ್ಷ ಅವಕಾಶ ಕೊಡುವುದಿಲ್ಲ. ಜಾತಿವಾದ, ಧಾರ್ಮಿಕ ಭೇದ, ಭಾಷಾ ದ್ವೇಷ, ಹೆಣ್ಣು- ಗಂಡು ಎಂಬ ತಾರತಮ್ಯಗಳನ್ನು ಸಂಹಾರ ಮಾಡಬೇಕಾಗಿದೆ. ಆದ್ದರಿಂದ ಸಿಪಿಎಂ ಅಭ್ಯರ್ಥಿ ರಮೇಶ ಪಾಟೀಲ್ ಬೇರಗಿಯವರ ಆಟೋ ರಿಕ್ಷಾದ ಗುರುತಿಗೆ ಮತ ನೀಡಿ ವಿಧಾನಸಭೆಯಲ್ಲಿ ಹೋರಾಟಕ್ಕೆ ಕಳಿಹಿಸಿ ಕೊಡಬೇಕಾಗಿದೆ ಎಂದರು.
ಬಸವರಾಜ ಹಿರೇಮನಿ, ಹುಚ್ಚಪ್ಪ ಮೂಲಿಮನಿ, ರಾಜಾಸಾಬ ನಿಡಿಗೋಳ, ಪರಶುರಾಮ, ಗೌಸಖಾನ ಕಲ್ಮಂಗಿ, ಶರಣಯ್ಯ, ರೇವಣ ಸಿದ್ದಯ್ಯ, ಶರಣಯ್ಯ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement