ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬತ್ತಿದ ಭೀಮಾ ನದಿ: ಒಣಗುತ್ತಿರುವ ಬಾಳೆ, ಕಬ್ಬು

Rashmi Kasaragodu
Updated On : 2 Aug 2013, 12:12 pm

ಕನ್ನಡಪ್ರಭ ವಾರ್ತೆ  ಅಫಜಲ್ಪುರ  ಆ.1
ಮುಂಗಾರು ಮಳೆ ವಿಳಂಬವಾಗಿರುವುದರಿಂದ ಕಳೆದ ವರ್ಷ ತಾಲೂಕಿನಲ್ಲಿ ರೈತರು ನಾಟಿ ಮಾಡಿರುವ ಸುಮಾರು 20 ಸಾವಿರ ಎಕರೆ ಕಬ್ಬು ಮತ್ತು 2 ಸಾವಿರ ಎಕರೆ ಬಾಳೆ ಮಳೆ ಇಲ್ಲದೆ ಒಣಗಿ ಹೋಗುತ್ತಿವೆ.
ತಾಲೂಕಿನಲ್ಲಿ ರೈತರು ಕಳೆದ 10 ತಿಂಗಳಿಂದ ಹಸುಗೂಸಿನಂತೆ ಬಾಳೆ ಬೆಳೆ ಜೋಪಾನ ಮಾಡುತ್ತಿದ್ದರು. ಆದರೆ, ಕಳೆದ 3-4 ತಿಂಗಳಿಂದ ಅಂತರ್ಜಲ ಮಟ್ಟ ಪೂರ್ತಿಯಾಗಿ ಬತ್ತಿರುವುದರಿಂದ ಸುಮಾರು 2 ಸಾವಿರ ಎಕರೆ ಬಾಳೆ ಬೆಳೆಯನ್ನು ರೈತರು ಕಳೆದುಕೊಂಡತಾಗಿದೆ.
ಬತ್ತಿದ ಬಾವಿಗಳು: ತಾಲೂಕಿನಲ್ಲಿ ಮುಂಗಾರು ಮಳೆ ಬಾರದೆ ಇರುವುದರಿಂದ ಕೊಳವೆಬಾವಿ ಮತ್ತು ತೆರೆದ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ತೋಟದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಜನರು ಮೇವು ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿ ತಮ್ಮ ಹೊಟ್ಟೆಪಾಡಿಗಾಗಿ ಗುಳೆ ಹೋಗುವ ಪರಿಸ್ಥಿತಿ ಬಂದಿದೆ.
ಭೀಮಾ ಬ್ಯಾರೆಜ್ನ ಹಿನ್ನಿರನ್ನು ನಂಬಿಕೊಂಡು ತೋಟದ ಬೆಳೆ ಮಾಡಿಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದರೆ, ಮುಂಗಾರು ಆರಂಭವಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರು ಮಳೆಬಾರದೆ ಇರುವುದರಿಂದ ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಅಲ್ಪ ಸ್ವಲ್ಪ ಇರುವ ನೀರು ಕೂಡ ಕಡಿಮೆಯಾಗಿರುವುದರಿಂದ ಹಾಗೂ ತಾಲೂಕಿನಲ್ಲಿ ಭೀಮಾನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ತಾಲೂಕಿನ ಬಂದರವಾಡ, ಸಾಗನೂರ.
ಪತ್ರಿಕೆಗೆ ಪ್ರತಿಕ್ರಿಯೆ: ದೇವಲಗಾಣಗಾಪುರ, ಶೇಷಗಿರಿ, ಮಣ್ಣೂರ, ಶಿವೂರ, ಕೂಡಗನೂರ, ಭಾಸಗಿ, ಹಿರಿಯಾಳ, ಉಡಚಾಣ ಗ್ರಾಮಗಳಲ್ಲಿ ಬೆಳೆದಿರುವ ಸುಮಾರು 5 ಸಾವಿರ ಎಕರೆ ಕಬ್ಬು ಒಣಗುತ್ತಿದೆ ಎಂದು ಅಲ್ಲಿನ ರೈತರಾದ ಪರಮೇಶ್ವರ ವಳಸಂಗ, ಅಣ್ಣಪ್ಪ ಬಿಜಾಪುರ ಮತ್ತು ಮಲ್ಲಿಕಾರ್ಜುನ ಆಲೂರ ನೋವಿನಿಂದ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅಂತರ್ಜಲ ಬತ್ತಿ ಹೋಗಿರುವುದರಿಂದ ಒಣಗಿ ಹೋಗಿರುವ ಕಬ್ಬು ಮತ್ತು ಬಾಳೆ ಬೆಳೆಗಳನ್ನು ತೋಟಗಾರಿಕೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು. ಸರ್ಕಾರ ರೈತರಿಗೆ ಪರಿಹಾರ ಮತ್ತು ಮುಂಗಾರು ಹಂಗಾಮಿನಲ್ಲಿ ಉಚಿತ ಬೀಜ ಗೊಬ್ಬರ ಪೂರೈಕೆ ಮಾಡಲು ಕ್ರಮ ಕೈಗೊಳ್ಳುಬೇಕೆಂದು ತಾಲೂಕಿನಲ್ಲಿ ರೈತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement