ಬಳಗಾನೂರು ಬಳಿ ಮಹಿಳೆ ಶವ ಪತ್ತೆ: ಕೊಲೆ ಶಂಕೆ
ರಾಯಚೂರು: ಸಿಂಧನೂರು ತಾಲೂಕಿನ ಬಳಗಾನೂರು ಗ್ರಾಮದ ಬಳಿಯ ಕೊಂಚಹಳ್ಳದಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ. ಮೃತಳನ್ನು ದೇವಮ್ಮ(30) ಎಂದು ಗುರುತಿಸಲಾಗಿದೆ. ಈಕೆಯನ್ನು ಆಕೆಯ ಪತಿ ನಾಗಪ್ಪ ಮತ್ತು ಸಂಬಂಧಿಕರು ಹೊಲವನ್ನು ಆಕೆಯ ಹೆಸರಿಗೆ ವರ್ಗಾಯಿಸುವಂತೆ ಪೀಡಿಸುತ್ತಿದ್ದು, ಅದೇ ಹಿನ್ನೆಲೆಯಲ್ಲಿ ಕೊಲೆ ಮಾಡಿ ಹಳ್ಳದಲ್ಲಿ ಎಸೆದಿದ್ದಾರೆಂದು ಪೊಲೀಸರಿಗೆ ದೂರಲಾಗಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ದೇವಸ್ಥಾನದಲ್ಲಿ ಕಳವು
ರಾಯಚೂರು: ತಾಲೂಕಿನ ಯರಮರಸ್ ಕ್ಯಾಂಪಿನಲ್ಲಿರುವ ದೇವಸ್ಥಾನದಲ್ಲಿ ಕಳವು ನಡೆದಿದ್ದು, ಸಾವಿರಾರು ರು. ಆಸ್ತಿ ದೋಚಲಾಗಿದೆ. ಕ್ಯಾಂಪಿನ ಪಾರಸ್ ವಾಟಿಕಾ ಕಾಲನಿಯಲ್ಲಿರುವ ದದಿಮತಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವ ಕಳ್ಳರು ದೇವಿ ಮೂರ್ತಿಯ ಬೆಳ್ಳಿ ಛತ್ರಿ, ದೇವಿಯ ಉತ್ಸವ ಮೂರ್ತಿ ಸೇರಿ ಒಟ್ಟು ರು. 15 ಸಾವಿರ ಬೆಲೆಯ ಆಭರಣ ದೋಚಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.