ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾವು ಬೇಸಾಯ ತರಬೇತಿ ಶಿಬಿರ

Rashmi Kasaragodu
Updated On : 2 Aug 2013, 12:11 pm

ಸುರಪುರ: ತಾಲೂಕಿನ ಕವಡಿಮಟ್ಟಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಶಾಂತಪುರದ ಮೈರಾಡಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬುಧವಾರ ರೈತರಿಗೆ ಮಾವಿನ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ಮುಖ್ಯಸ್ಥರು ಹಾಗೂ ತೋಟಗಾರಿಕೆ ತಜ್ಞರಾದ ಡಾ. ಪಂಪಣ್ಣ ವೈ ಅವರು ಮಾವಿನ ತಳಿಗಳ ಆಯ್ಕೆ, ನಾಟಿ ಮಾಡುವ ವಿಧಾನ, ನಾಟಿ ನಂತರದ ಆರೈಕೆ ಹಾಗೂ ಸಮಗ್ರ ನಿರ್ವಹಣೆ ಪದ್ಧತಿಯನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ವಿವರಿಸಿದರು. ಸಸ್ಯರೋಗ ತಜ್ಞರಾದ ಪಿ. ಪಾಲಯ್ಯನವರು ಮಾವಿಗೆ ಬರುವ ವಿವಿಧ ರೋಗಗಳು ಹಾಗೂ ಅವುಗಳ ನಿರ್ವಹಣೆ ಹಾಗೂ ಕೀಟ ತಜ್ಞರಾದ ರಾಘವೆಂದ್ರ ಎಲಿಗಾರ ಅವರು ಮಾವಿಗೆ ಬರುವ ಕೀಟಗಳು ಹಾಗೂ ಅವುಗಳ ಹತೋಟಿಯ ಬಗ್ಗೆ ಮಾಹಿತಿ ನೀಡಿದರು. ಮೈರಾಡ ಸಂಸ್ಥೆಯ ವಿವೇಕ ಇದ್ದರು. ತಾಲೂಕಿನ ಬೈಲಾಪುರ, ಸಿದ್ದಾಪುರ.ಬಿ, ಬೈಲಕುಂಟಿ, ಗೆದ್ದಲಮರಿ, ಜುಮಲಾಪುರ, ಕಡದರಹಾಳ ಗ್ರಾಮದ ರೈತರು ಭಾಗವಹಿಸಿ ಮಾವು ಬೇಸಾಯದ ಬಗ್ಗೆ ಮಾಹಿತಿ ಪಡೆದರು.
ಚನ್ನೂರರಿಂದ ಇಫ್ತಾರ್ ಕೂಟ
ಯಾದಗಿರಿ: ಜಿಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಶ್ರೀನಿವಾಸರೆಡ್ಡಿ ಚನ್ನೂರ ಅವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಬುಧವಾರ ನಗರದ ಎಂ.ಆರ್. ಗೋಗಿ ಫಂಕ್ಷನ್ ಹಾಲ್ನಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚನ್ನೂರ, ರಂಜಾನ್ ಹಬ್ಬ ಮುಸ್ಲಿಂ ಬಾಂಧವರಿಗೆ ಪವಿತ್ರ ಹಬ್ಬವಾಗಿದೆ. ಎಲ್ಲಾ ಧರ್ಮಗಳು ಮನುಷ್ಯನಲ್ಲಿ ಮಾನವೀಯತೆ ಸಂದೇಶಗಳನ್ನು ಬಿತ್ತಿ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮೂಡಿಸುತ್ತಿವೆ ಎಂದು ಹೇಳಿದರು.
ಭಾರತ ದೇಶ ಭಾವೈಕತೆಯ ತವರೂರು. ಇಲ್ಲಿ ಎಲ್ಲಾ ಜನಾಂಗದ ಜನತೆ ಶಾಂತಿ ಸೌಹಾರ್ದತೆಯಿಂದ ಬಾಳಿ ಇತರ ದೇಶಗಳಿಗೆ ಮಾದರಿಯಾಗಿದ್ದಾರೆ ಎಂದರು. ಇಫ್ತಾರ್ ಕೂಟದಲ್ಲಿ ನಗರಸಭೆ ಸದಸ್ಯ ಶರಣಪ್ಪ ಗುಳಗಿ, ಸಲೀಂ ಗೋಗಿ, ಮೋಸಿನ್ ಮೀರ್, ಆಹ್ಮದ್ ಲಾತೂರ್, ಪಕ್ರೂದಿನ್, ಬಸವರಾಜ ರಾಜಾಪೂರ, ಅಂಭರೇಶ ಆಂದೇಲಿ, ಭೀಮರಡ್ಡಿ ಕೌಳೂರ್, ಅಂಬಣ್ಣ ಅನಕಸೂಗುರ್, ಮಲ್ಲು ಕೌಳೂರ್ ಇತರರು ಇದ್ದರು.
'ಸಿದ್ಧಾಂತಗಳಿಗೆ ಬದ್ಧರಾಗಿ'
ಸುರಪುರ: ಜೈ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳು ಸಂಘಟನೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿರಬೇಕೆಂದು ಸಂಘಟನೆ ತಾಲೂಕಾಧ್ಯಕ್ಷ ಶಿವುಮಾನಯ್ಯ ನಾಯಕ ದೇವರಗೋನಾಲ ಕರೆ ನೀಡಿದರು. ಇಲ್ಲಿಯ ಪ್ರಭು ಕಾಲೇಜಿನಲ್ಲಿ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ನೇಮಕ ಸಮಾರಂಭದಲ್ಲಿ ಮಾತನಾಡಿದರು. ಶರಣಬಸಪ್ಪ ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement