ನಟಿ ವೀಣಾ ಮಲ್ಲಿಕ್ ಗಡಿಪಾರಿಗೆ ಒತ್ತಾಯ
ಯಾದಗಿರಿ: ಕನ್ನಡದ ಸಿಲ್ಕ್ ಚಲನಚಿತ್ರದಲ್ಲಿ ನಟಿಸಿರುವ ಪಾಕ್ ನಟಿ ವೀಣಾ ಮಲ್ಲಿಕ್ ಪಾಕಿಸ್ತಾನದ ಭೂಗತ ಲೋಕದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ಅವರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಶ್ರೀರಾಮ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ. ಮಲ್ಲಿಕ್ ಅಭಿನಯದ ಸಿಲ್ಕ್ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ, ನಟಿಯ ಮೇಲೆ ಕೂಡ ಸಂಶಯ ವ್ಯಕ್ತವಾಗುತ್ತಿದೆ. ಕಾರಣ ಅವಳು ಅಭಿನಯದ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.