ಬಿಎಸ್ಎಫ್ ಡಿಟೆಕ್ಟರ್ ಪ್ರದರ್ಶಕರು ರಾಜ್ಯ ಮಟ್ಟಕ್ಕೆ
ಮುದಗಲ್: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಾಯಚೂರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಯರಮರಸ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2012-13 ರ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಸ್ಥಳೀಯ ಸರಕಾರಿ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಬಿಎಸ್ಎಫ್ ಡಿಟೆಕ್ಟರ್ ಪ್ರದರ್ಶಕರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೇಶದ ಗಡಿ ಭದ್ರತೆಯಲ್ಲಿ ಮತ್ತು ಸೈನಿಕರಿರುವ ಪ್ರದೇಶದಲ್ಲಿ ಪರಿಚಿತರನ್ನು ಪತ್ತೆ ಹಚ್ಚುವ ಸಾಮಗ್ರಿಯಾದ ಬಿಎಸ್ಎಫ್ ಡಿಟೆಕ್ಟರ್ ಮಾದರಿ ತಯಾರಿಸಿ ವಿಜ್ಞಾನ ಶಿಕ್ಷಕರಾದ ಮಹ್ಮದ ಶರೀಫ್, ನೀಲಣ್ಣ ಅಚನೂರ, ಕುಮಾರಿ ಅನ್ನಪೂರ್ಣ ಮಾರ್ಗದರ್ಶದೊಂದಿಗೆ ವಿದ್ಯಾರ್ಥಿಗಳಾದ ರಮೇಶ, ಹನುಮಂತಪ್ಪ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆ ಉಪ ಪ್ರಾಂಶುಪಾಲ ಎಂ.ಎಚ್. ಗೌಡರ, ಎಸ್ಡಿಎಂಸಿ ಅಧ್ಯಕ್ಷ ಹರ್ಷ ವ್ಯಕ್ತಪಡಿಸಿ, ವಿಜ್ಞಾನ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.