'ಶುದ್ಧ ನೀರು ಸೇವನೆಯಿಂದ ರೋಗಗಳ ನಿವಾರಣೆ'
ಸಿಂಧನೂರು: ಶುಚಿಯಾದ ನೀರನ್ನು ಸೇವನೆ ಮಾಡುವುದರಿಂದ ಅನೇಕಗಳ ನಿಯಂತ್ರಣ ಮಾಡಿಕೊಳ್ಳಬಹುದು ಎಂದು ನಗರದ ಮಕ್ಕಳ ತಜ್ಞ ಡಾ. ಶಿವರಾಜ ಹೇಳಿದರು.
ಬಸವ ಚಾರಿಟಬಲ್ ಟ್ರಸ್ಟ್ನಲ್ಲಿ ಧರ್ಮದರ್ಶಿಗಳ ದಾಸೋಹದಿಂದ 65 ಸಾವಿರ ರೂ.ಗಳಲ್ಲಿ ನಿರ್ಮಿಸಲಾದ 750 ಲೀಟರ್ ಸಾಮರ್ಥ್ಯದ ಶುದ್ಧ ಕುಡಿವ ನೀರಿನ ಫಿಲ್ಟರ್ನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಅಶುದ್ಧ ನೀರನ್ನು ಕುಡಿಯುವುದರಿಂದ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶುದ್ಧವಾದ ನೀರು ಕುಡಿಯುವುದರಿಂದಲೇ ಅನೇಕ ರೋಗಗಳು ಬರದಂತೆ ಎಚ್ಚರಿಕೆ ವಹಿಸಬಹುದಾಗಿದೆ. 100 ಮಕ್ಕಳನ್ನು ಹೊಂದಿರುವ ಬಸವ ಪ್ರಸಾದ ನಿಲಯದ ಶುದ್ಧ ಕುಡಿವ ನೀರಿನ ಫಿಲ್ಟರ್ ಹಾಕಿರುವುದು ಅತ್ಯಂತ ಶ್ಲಾಘನೀಯ. ನೀರನ್ನು ಮಿತವಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬಸವ ಚಾರಿಟಬಲ್ ಟ್ರಸ್ಟ್ನ್ನು ವೀರಭದ್ರಪ್ಪ ಕುರುಕುಂದಾ, ಸಿದ್ರಾಮಪ್ಪ ಸಾಹುಕಾರ, ಗುಂಡಪ್ಪ ಬಳಿಗಾರ, ಸೋಮಶೇಖರ ಚಿಂಚರಿಕಿ, ನಾಗಭೂಷಣ ನವಲಿ ಹಾಗೂ ಇತರರು ಇದ್ದರು. ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ಕಾರ್ಯಕ್ರಮ ನಿರೂಪಿಸಿದರು.