ಹಾಲು ಸೇವನೆಯಿಂದ ಉತ್ತಮ ಆರೋಗ್ಯ: ಸ್ವಾಮಿ
ಸಿಂಧನೂರು: ಮಕ್ಕಳಲ್ಲಿ ಉತ್ತಮ ಕಲಿಕೆಯಾಗಲು ಉತ್ತಮ ಆರೋಗ್ಯಬೇಕು. ಮಕ್ಕಳ ಆರೋಗ್ಯ ಸುಧಾರಿಸುವ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಮುಖ್ಯಗುರು ಬಸಯ್ಯ ಸ್ವಾಮಿ ಅಭಿಪ್ರಾಯಪಟ್ಟರು.
ಕನಕನಗರ ಸಿಆರ್ಸಿ ವ್ಯಾಪ್ತಿಯ ನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳ ಹಾಲು ವಿತರಿಸಿ ಮಾತನಾಡುತ್ತಾ ಇಂದು ಶಿಕ್ಷಣಕ್ಕೆ ಶ್ರೇಯೋಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಪ್ರಯತ್ನಿಸುತ್ತಿವೆ ಎಂದರು. ಡಯಟ್ನ್ನು ಹಿರಿಯ ಉಪನ್ಯಾಸಕ ಭೀಮ ನಾಯಕ ಮಾತನಾಡಿ, ಕರ್ನಾಟಕ ಸರ್ಕಾರದ ಆಶಾದಾಯಕ ಕಾರ್ಯಕ್ರಮವಾಗಿದ್ದು, ಸಮುದಾಯದವರು ಮಕ್ಕಳಿಗೆ ಲೋಟ ಹಾಗೂ ಇನ್ನಿತರ ಪರಿಕರಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.
ವೇದಿಕೆ ಮೇಲೆ ಶಾಲಾ ಎಸ್ಡಿಎಮ್ಸಿ ಅಧ್ಯಕ್ಷ ಮೌಲಾಸಾಬ, ಉಪಾಧ್ಯಕ್ಷ ಸೋಮನಾಥ ಸೂಲಂಗಿ, ಸಿಆರ್ಪಿಗಳಾದ ರಾಮದಾಸ, ವಿರುಪಣ್ಣ ಸೇರಿದಂತೆ ಇನ್ನಿತರರಿದ್ದರು. ಶಿಕ್ಷಕ ಶ್ರೀಶೈಲ ಕೌದಿ ಸ್ವಾಗತಿಸಿದರು. ಶಿಕ್ಷಕ ಯಂಕಪ್ಪ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸುಮಂಗಲಾ ವಂದಿಸಿದರು.
ಕನಕದಾಸ ಪ್ರೌಢಶಾಲೆಯಲ್ಲಿ ಕ್ಷೀರಭಾಗ್ಯ
ನಗರದ ಕನಕದಾಸ ಪ್ರೌಢಶಾಲೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಂ. ದೊಡ್ಡಬಸವರಾಜ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಗುರುವಾರ ಚಾಲನೆ ನೀಡಿದರು. ನಗರಸಭೆ ಸದಸ್ಯ ಗ್ಯಾನಪ್ಪ, ವಸತಿ ನಿಲಯದ ಅಧ್ಯಕ್ಷ ಸಣ್ಣ ಈರಪ್ಪ ಪೂಜಾರ, ಕಾರ್ಯದರ್ಶಿ ಹಿರೇಲಿಂಗಪ್ಪ ಹಂಚಿನಾಳ, ವ್ಯವಸ್ಥಾಪಕ ಭೀಮಾಜಿ ಕುಲಕರ್ಣಿ, ಮುಖ್ಯೋಪಾಧ್ಯಾಯ ನಾಗಲಿಂಗನಗೌಡ ಮತ್ತಿತರರು ಇದ್ದರು.