'ಒಗ್ಗಟ್ಟಾಗಿ ಸೌಲಭ್ಯ ಪಡೆಯಿರಿ'
ರಾಯಚೂರು: ನಗರದಲ್ಲಿ ಇತ್ತೀಚೆಗೆ ಎಪಿಎಂಸಿ ಸಭಾಂಗಣದಲ್ಲಿ ಕುರುಬ ಸಮಾಜದ ಒಂದು ದಿನದ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಏಗನೂರು ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಒಗ್ಗಟ್ಟಿನಿಂದ ಸಮಾಜದವರು ಮುಂದುವರಿದಲ್ಲಿ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ ಎಂದರು.
ಸಮಾರಂಭದ ಸಾನ್ನಿಧ್ಯವನ್ನು ಕನಕಗುರುಪೀಠದ ಶ್ರೀಸಿದ್ದರಾಮಾನಂದಪುರಿ ಸ್ವಾಮೀಜಿ, ಮಟಮಾರಿಯ ಜ್ಞಾನಾನಂದ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಎಂ.ಈರಣ್ಣ, ನಗರಾಧ್ಯಕ್ಷ ನಾಗರಾಜ ಮಡ್ಡಿಪೇಟೆ, ನೌಕರರ ಸಂಘದ ಪದಾಧಿಕಾರಿ ಟಿ.ಕೆ. ಪೂಜಾರಿ, ಗುರುಲಿಂಗಪ್ಪ, ನಗರಸಭೆ ಸದಸ್ಯ ರಾಮು, ಮಿರ್ಜಾಪೂರ ಮಹಾದೇವಪ್ಪ ಉಪಸ್ಥಿತರಿದ್ದರು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಕುರುಬ ಸಮಾಜದ ಬಾಂಧವರು ಕಾರ್ಯಾಗಾರದಲ್ಲಿದ್ದರು.